×
Ad

ಹನುರು: ಸಾಮಾಜಿಕ ಲೆಕ್ಕಪರಿಶೋಧನಾ ಸಭೆ

Update: 2017-07-31 18:26 IST

ಹನೂರು, ಜು.31: ಸನ್ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ನರೇಗಾ ಯೋಜನೆಯಡಿ 100 ದಿನಗಳಿದ್ದ ಕೂಲಿ ಕೆಲಸವನ್ನು ಬರಗಾಲ ಜಿಲ್ಲೆಯಾಗಿ ಘೋಷಣೆ ಮಾಡ್ಡಿದ್ದರಿಂದ 150 ದಿನಗಳನ್ನು ನೀಡಿದೆ .ಇದ್ದನ್ನು ಗ್ರಾಮಸ್ಥರು ಸದುಪಯೋಗಿಸಿಕೂಳ್ಳಬೇಕು ಎಂದು ತಾಲ್ಲೂಕು ಸ್ಥಾಯಿ ಸಮಿತಿಯ ಅದ್ಯಕ್ಷರಾದ ಜಾವೀದ್ ಅಹಮದ್ ತಿಳಿಸಿದರು.

 ಕ್ಷೇತ್ರ್ರ ವ್ಯಾಪಿಯ ಬಂಡಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಮಾದಲನೇ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯಲ್ಲಿ ಮಾತನಾಡಿದ ಇವರು, ಉದ್ಯೋಗ ಕೇಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ಯೋಜನೆಯಡಿ ಉದ್ಯೋಗ ಪಡೆದ ಪ್ರತಿಯೊಬ್ಬರಿಗೂ ಪ್ರತಿದಿನ ರೂ.236 ದಿನಗೂಲಿ ನೀಡಲಾಗುತ್ತಿದೆ. ಒಂದೊಮ್ಮೆ ಗ್ರಾಮಸ್ಥರು ಉದ್ಯೋಗ ಕೇಳಿಯೂ ಪಂಚಾಯಿತಿ ವತಿಯಿಂದ ಉದ್ಯೋಗ ನೀಡಲಾಗದಿದ್ದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುವುದು. ಆದುದರಿಂದ ಪ್ರತಿಯೊಬ್ಬರೂ ಉದ್ಯೋಗ ಚೀಟಿಯ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಉದ್ಯೋಗ ಚೀಟಿ ಮದ್ಯವರ್ತಿಗಳಿಗೆ ನೀಡದೆ ಇದರ ಸದುಪಯೋಗವನ್ನು ತಾವೇ ಪಡೆದುಕೂಂಡಾಗ ಮಾತ್ರ ಈ ಯೋಜನೆ ಯಶಸ್ಸಾಗಲೂ ಸಾದ್ಯ. ಹಾಗೆಯೇ ರೈತರು ಒಕ್ಕಣೆ ಕೆಲಸವನ್ನು ರಸ್ತೆಗಳಲ್ಲಿ ಮಾಡುವುದ್ದರಿಂದ ಆ ಪದಾರ್ಥಗಳು ಹಾಳಾಗಿ ವಿಷಕಾರಿಯಾಗುತ್ತದೆ. ಆದ್ದುದರಿಂದರೈತರು ಸಾರ್ವಜನಿಕವಾಗಿ ನಿರ್ಮಿಸಿಕೊಂಡಿರುವ ಒಕ್ಕಣೆ ಕಣಗಳಲ್ಲಿ ರಾಗಿ, ಜೋಳ ಕೊಂಬು ಇನ್ನಿತರ ಪದಾರ್ಥಗಳನ್ನು ಒಕ್ಕಣೆಗಳನ್ನು ಮಾಡುವ ಅವಕಾಶವಿದೆ. ಪ್ರತಿಯೊಬ್ಬರು ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕು ಹೇಳಿದರು.

ಬಂಡಳ್ಳಿ ಕ್ಲಸ್ಟರ್ ನ ಸಿಆರ್‌ಪಿಯಾದ ವಿಜಯ್‌ಕುಮಾರ್ ಮಾತನಾಡಿ, ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಿಕೆಗೆ ಹೆಚ್ಚು ಗಮನ ಹರಿಸಬೇಕು. ಹಾಗೂ ಶಾಲೆಯಿಂದ ಹೂರ ಉಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಲೂ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಜೊತೆ ಸಾರ್ವಜನಿಕರೂ ಕೈ ಜೋಡಿಸಬೇಕು. ಹಾಗೂ ಪ್ರತಿಯೊಂದು ಮಗುವಿಗೆ ಆಧಾರ್‌ ಕಾರ್ಡ ಕಡ್ಡಾಯವಾಗಿರುತ್ತದೆ .ಆದುದ್ದರಿಂದ ಆಧಾರ್‌ ಕಾರ್ಡನ್ನು ನೋಂದಾಯಿಸಿಕೋಳ್ಳಬೇಕು ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯ ಅದ್ಯಕ್ಷ ರಾಜಪ್ಪ, ಉಪಾದ್ಯಕ್ಷ ರಾಜಮ್ಮ, ಸದಸ್ಯರಾದ ಸಣ್ಣಮದಪ್ಪ, ಪ್ರಸನ್ನಕುಮರ್, ಶಾಹುಲ್‌ಅಹಮದ್, ನೂಡಲ್‌ ಅಧಿಕಾರಿಯಾದ ಸಿಬ್ನತ್‌ಉಲ್ಲಾ, ತಾಲ್ಲೂಕು ಸಂಯೋಜಕ ಮನೋಹರ್‌ಪಿಡಿಒ ನಮೀತಾ ತೇಜಗೌಡ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News