×
Ad

ವಿದ್ಯುತ್ ಮೇಲ್ದರ್ಜೆಗೇರಿಸಲು ಎಕ್ಸ್‌ಪ್ರೆಸ್ ಲೈನ್ ಅಳವಡಿಕೆ: ಎಂ.ಕೆ.ಪ್ರಾಣೇಶ್

Update: 2017-07-31 18:37 IST

ಮೂಡಿಗೆರೆ, ಜು.31: ಮೂಡಿಗೆರೆ ಉಪ ವಿಭಾಗ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಗಳನ್ನು ನಿವಾರಿಸುವ ದೃಷ್ಠಿಯಿಂದ ಇರುವಂತಹ ಮಾರ್ಗಗಳನ್ನು ಮೇಲ್ದರ್ಜೆಗೇರಿಸಲು ಕಾಮಗಾರಿ ಶೀಘ್ರವೇ ಪ್ರಾರಂಭಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು.

ಅವರು ಸೋಮವಾರ ಇಲ್ಲಿನ ತಾಪಂ ಆವರಣದಲ್ಲಿ ವಿಕಲಚೇತನ ದಾರಹಳ್ಳಿಯ ಸುನೀಲ್‌ಕುಮಾರ್ ಎಂಬವರಿಗೆ ಕೃತಕ ಕಾಲು ಜೊೀಡಣೆಗಾಗಿ ಎಂಎಲ್‌ಸಿ ಅನುಧಾನದಲ್ಲಿ 1 ಲಕ್ಷರೂ.ಗಳ ಚೆಕ್ ವಿತರಿಸಿ ಮಾತನಾಡಿದರು.

ಅಕ್ಟೋಬರ್ 2016ರಲ್ಲಿ ತಾಲೂಕಿನ ವಿದ್ಯುತ್ ಸಮಸ್ಯೆಗಳಾದ ಲೇಡ್ ಶೆಡ್ಡಿಂಗ್, ಲೋ ಓಲ್ಟೇಜ್ ಮತ್ತು ವಿದ್ಯುತ್ ಮಾರ್ಗದಲ್ಲಿ ನಿರಂತರ ಸಮಸ್ಯೆಗಳನ್ನು ತಡೆಯುವ ದೃಷ್ಠಿಯಿಂದ ಎಕ್ಸ್‌ಪ್ರೆಸ್ ಮಾರ್ಗಗಳನ್ನು ಮಾಡಲು ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಿರಂತರ ಪ್ರಯತ್ನದಿಂದ ಕಾಮಗಾರಿಗೆ ಪ್ರಾರಂಭಕ್ಕೆ ಚಾಲನೆ ದೊರಕಿದೆ ಎಂದು ಹೇಳಿದರು.

ಪ್ರಮುಖವಾಗಿ ಬಣಕಲ್ ಶಾಖೆಯ ಕೊಟ್ಟಿಗೆಹಾರ ಎಕ್ಸ್‌ಪ್ರೆಸ್ ಲೈನ್‌ಗೆ 121.13 ಲಕ್ಷ, ಜನ್ನಾಪುರದ ದೇವವೃದ್ಧ ಎಕ್ಸ್‌ಪ್ರೆಸ್ ಲೈನ್‌ಗೆ 97.32 ಲಕ್ಷ, ಮೂಡಿಗೆರೆಯ ಬಿಳುಗುಳ ಎಕ್ಸ್‌ಪ್ರೆಸ್ ಲೈನ್‌ಗೆ 96.69 ಲಕ್ಷ ಹಾಗೂ ಮಾಕೋನಹಳ್ಳಿ ಎಕ್ಸ್‌ಪ್ರೆಸ್ ಲೈನ್‌ಗೆ 36.93 ಲಕ್ಷ ಮಂಜೂರಾಗಿದ್ದು, ಸಾರ್ವಜಿನಕರಿಗೆ ವಿದ್ಯುತ್ ವ್ಯತೆಯಲ್ಲಿ ಉಂಟಾಗುವ ಒಂದಷ್ಟು ಸಮಸೆ್ಯಯನ್ನು ತಡೆಗಟ್ಟಬಹುದು ಎಂದರು.

ಜಿಪಂ ಸಿಇಓ ಡಾ. ಆರ್.ರಾಘಪ್ರಿಯ ವರ್ಗಾವಣೆಯಾಗಿದ್ದಾರೆ. ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸುವತ್ತ ಪ್ರಮುಖ ಪಾತ್ರ ವಹಿಸಿದ್ದರು. ಅವರು ಜಿಲ್ಲೆಯ ಜನತೆ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದು, ಇವರಂತೆ ಕಾರ್ಯ ನಿರ್ವಹಿಸುವಂತಹ ಅಧಿಕಾರಿಯನ್ನು ಸರಕಾರ ಕೂಡಲೇ ನಿಯೋಜಿಸಬೇಕೆಂದು ಆಗ್ರಹಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News