ಕಳ್ಳತನದ ಜೀಪುಗಳಿಗೆ ನಕಲಿ ದಾಖಲೆ ಸೃಷ್ಟಿ ಜಾಲ; ಮೂವರು ಆರೋಪಿಗಳ ಬಂಧನ: 10 ಜೀಪುಗಳ ವಶ

Update: 2017-07-31 14:05 GMT

ಚಿಕ್ಕಮಗಳೂರು, ಜು.31: ಕಳ್ಳತನ ಮಾಡಿದ ಜೀಪುಗಳನ್ನು ನಕಲಿ ದಾಖಲೆ ಸೃಷ್ಠಿಸಿ ಮಾರಾಟಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಇಲ್ಲಿನ ಪೊಲೀಸರು ಅಂದಾಜು ಸುಮಾರು 40 ಲಕ್ಷ ರೂ.ಗಳ ಬೆಲೆಯ 10 ಜೀಪುಗಳನ್ನು ವಶಪಡಿಸಿಕೊಂಡು ಮೂವರನ್ನುಬಂಧಿಸಿರುವುದಾಗಿ ಹೆಚ್ಚುವರಿ ಎಸ್ಪಿ ಜಗದೀಶ್ ತಿಳಿಸಿದರು.

ಅವರು ಸೋಮವಾರ ಎಸ್ಪಿ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದಲ್ಲಿ ಬೇರೆ ಜಿಲ್ಲೆಗಳಿಂದ ಕಳವು ಜೀಪುಗಳನ್ನು ತಂದು ಸ್ಕ್ರಾಪ್ ಆದ ಜೀಪುಗಳ ಚಾರ್ಸಿ ಹಾಗೂ ಇಂಜಿನ್ ನಂಬರ್‌ಗಳನ್ನು ಪಂಚ್ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಮಾಹಿತಿಯ ಆಧಾರದಲ್ಲಿ ಡಿಸಿಐಬಿ ಪೊಲೀಸರು ಈ ಜಾಲವನ್ನು ಪತ್ತೆ ಹಚ್ಚಿದ್ದಾರೆಂದುತಿಳಿಸಿದರು.

ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ನಡೆದ ಈಕಾರ್ಯಚರಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜೀಪ್ ಮಾರಾಟ ಮಾಡಿದ್ದ ಅತ್ತಿಗುಂಡಿ ಗ್ರಾಮದ ಮಕ್ಸೂದ್ ಅಹಮ್ಮದ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಕಲಬುರಗಿ ಜಿಲ್ಲೆಯ ಆಳಂದ ಸುತ್ತಮುತ್ತಲ ಪ್ರದೇಶದಲ್ಲಿ ಕಳ್ಳತನಮಾಡಿ ಜೀಪುಗಳನ್ನು ಇಲ್ಲಿಗೆ ತಂದು ಚಾರ್ಸಿ ಮತ್ತು ಇಂಜಿನ್ನಂಬರ್‌ಗಳನ್ನು ತೆಗೆದುದಾಖಲೆಗಳನ್ನು ಸೃಷ್ಟಿಸಿ ಒಂದೊಂದು ಜೀಪ್‌ಗೆ ಸುಮಾರು 4 ಲಕ್ಷದವರೆಗೆ ಮಾರಾಟ ಮಾಡಲಾಗತ್ತತ್ತೆಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಹಳ್ಳಿಯ ಮ್ಯಾಕಾನಿಕ್ ಒಬ್ಬರು ಲೇಥ್ವರ್ಕ್ಸ್‌ನ ಅಜ್ಜು ಇವರುಗಳನ್ನು ಬಂಧಿಸಿ ಗ್ರೈಂಡಿಗ್ ಮಿಷಿನ್ ಮತ್ತು ನಂಬರ್ಪಂಚ್‌ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆಹಾಜರುಪಡಿಸಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದುತಿಳಿಸಿದರು.

ಕಾರ್ಯಾಚರಣೆಯಲ್ಲಿಡಿಸಿಐಬಿ ಸಿಬ್ಬಂಧಿಗಳಾದ ವೆಂಕಟೇಶ್, ಮೂರ್ತಿ,ಸವಿನಯ, ಲಿಂಗಮೂರ್ತಿ, ಬಸವರಾಜು ಪಾಲ್ಗೊಂಡಿದ್ದರೆಂದುಎ.ಎ.ಎಸ್.ಪಿ. ಜಗದೀಶ್ ತಿಳಿಸಿದರು.

ಈ ಸಮಯದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂಧಿಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News