ಮಾಹಿತಿ ತರದೆ ಸಭೆಗೆ ಬರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು:ಸಿ.ಟಿ.ರವಿ

Update: 2017-07-31 14:09 GMT

ಚಿಕ್ಕಮಗಳೂರು ಜು 31: ಕೆಡಿಪಿ ಸಭೆಗೆ ಬರುವ ಅಧಿಕಾರಿಗಳು ಇಲಾಖೆಯ ಮಾಹಿತಿಯನ್ನು ತರದೆ ಸಂತೆಗೋ, ಮಾವನ ಮನೆಗೋ ಹೊಗುವ ರೀತಿಯಲ್ಲಿ ಬರುತ್ತಾರೆ. ಮಾಹಿತಿ ತರದೆ ಸಭೆಗೆ ಬರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದ ಶಾಸಕ ಸಿ.ಟಿ.ರವಿ ಸೂಚಿಸಿದರು.

ಅವರು ಸೋಮವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕೆಡಿಪಿ ಸಭೆಗಳಿಗೆ ನಿರ್ಲ್ಯಕ್ಷವಹಿಸುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮುಂದಿನ ಸಭೆಯಲ್ಲಿ ಇಲಾಖೆಯ ಸಂಪೂರ್ಣ ಮಾಹಿತಿ ತರಬೇಕು ಮತ್ತು ಆಗುವ ಕಾಮಗಾರಿಗಳನ್ನುಶೀಘ್ರದಲ್ಲಯೇ ಪೂರ್ಣಗೊಳಿಸುವಂತೆ ಸೂಚನೆ ನಿಡಿದರು.

ಶುದ್ಧಗಂಗಾ ಘಟಕ ಕಾಮಗಾರಿಗಳು ಕೆಲವೊಂದು ಗ್ರಾಮದಲ್ಲಿ ಗುಣಮಟ್ಟದ ಕೆಲಸ ಆಗಿಲ್ಲ. ಕೆಲವುಕಡೆ ಸಂಪೂರ್ಣ ಗೊಂಡಿದ್ದರೂ ಜನರಿಗೆ ಕುಡಿಯುವ ನಿೀರುವಿತರಿಸುತ್ತಿಲ್ಲ. ಸಬಂದಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತಕ್ಷಣವೇ ಕುಡಿಯುವನಿೀರು ನೀಡಬೇಕು. ತೇಗೂರು ರಸ್ತೆ ಕಾಮಗಾರಿಗೆ 3 ವರ್ಷ ಕಳೆದರೂಕೆಲಸ ಸಂಪೂರ್ಣ ಮುಗಿಸಿಲ್ಲ. ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದ ಅವರು, ಪಶುಸಂಗೋಪನೆ ಇಲಾಖೆಯಿಂದ ಗುಣ ಮಟ್ಟದ ಮೇವನ್ನು ವಿತರಿಸಬೇಕು ಎಂದು ಹೇಳಿದರು.

ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌಗಳನ್ನು ಉಚಿತವಾಗಿ ವಿತರಿಸಬೇಕು. ಆದರೆ ಕೆಲವೋಂದು ಗ್ಯಾಸ್ ಏಜನ್ಸಿಯವರು ಬಡವರಿಂದ 2ಸಾವಿರಕ್ಕೂ ಹೆಚ್ಚು ಹಣ ಕೇಳುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ. ಸಂಬಂದಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಪ್ರದಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ಪರಿಹಾರವನ್ನು ಕೃಷಿಇಲಾಖೆ ಅಧಿಕಾರಿಗಳು ಹೆಚ್ಚು ಜವಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಡಿಸಿಸಿಬ್ಯಾಂಕಿಗೆ ಬಂದಿರುವ ಬೆಳೆ ಪರಿಹಾರದ ಮೋತ್ತದ ಸಮಗ್ರ ಮಾಹಿತಿಯನ್ನು ನಿೀಡಬೇಕು.ಅರಣ್ಯ ಇಲಾಖೆ ವತಿಯಿಂದ ಹೂವು ಹಣ್ಣು ಮರಗಳನ್ನು ಹೆಚ್ಚುವಿತರಿಸಬೇಕು ಎಂದರು.

ಸಭೆಯಲ್ಲಿ ಜಿಂಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷಬೆಳವಾಡಿ ರವೀಂದ್ರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಲಿಂಗರಾಜು, ಜಿಪಂ ಸದಸ್ಯರಾದ ಸೋಮಶೇಖರ್, ಜಸಂತಾ ಅಲ್ ಕುಮಾರ್,ಪ್ರೇಮ ಮಂಜುನಾಥ್, ತಾಪಂಅಧ್ಯಕ್ಷ ಇ.ಆರ್.ಮಹೇಶ್, ಸ್ಥಾಯಿಸಮಿತಿ ಅಧ್ಯಕ್ಷ ರಮೇಶ್ ಸಿದ್ದಾಪುರ, ತಾಪಂ ಇಓ ಸಿದ್ದಪ್ಪಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News