ರಾಜ್ಯ ಸರಕಾರ ನುಡಿದಂತೆ ನಡೆದಿದೆ: ವೀಣಾಅಚ್ಚಯ್ಯ

Update: 2017-07-31 14:14 GMT

ಮಡಿಕೇರಿ, ಜು.31: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆದಿದ್ದು, ಅನೇಕ ಜನಪರ ಭಾಗ್ಯಗಳನ್ನು ಘೋಷಿಸಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನತೆಯನ್ನು ಭಾಗ್ಯಶಾಲಿಗಳನ್ನಾಗಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಬಣ್ಣಿಸಿದ್ದಾರೆ.

ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ಅನುದಾನದಲ್ಲಿ ಬೆಟ್ಟಗೇರಿ ಪಂಚಾಯತ್ ವ್ಯಾಪ್ತಿಯ ಗ್ರಾಮದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭವನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಕಾರ್ಯಕರ್ತರ ಕೋರಿಕೆಗೆ ಸ್ಪಂದಿಸುತ್ತಿರುವ ಮುಖ್ಯಮಂತ್ರಿಗಳು ವರ್ಷಕ್ಕೆ 50 ಕೋಟಿಯಂತೆ ಇಲ್ಲಿಯವರೆಗೆ ಒಟ್ಟು 200 ಕೋಟಿ ರೂ.ಗಳನ್ನು ಕೊಡಗಿನ ಗ್ರಾಮೀಣರಸ್ತೆಗಳ ಅಭಿವೃದ್ಧಿಗೆ ನೀಡಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಕೊಡಗು ಜಿಲ್ಲೆಯ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ವೀಣಾಅಚ್ಚಯ್ಯ ಹೇಳಿದರು.

2016-17ರಡಿಯಅನುದಾನದಲ್ಲಿ ಬೆಟ್ಟಗೇರಿ ಪಂಚಾಯ್ತಿ ವ್ಯಾಪ್ತಿಯ ಅರ್ವತ್ತೋಕ್ಲು , ಬೆಟ್ಟಗೇರಿ, ಪಾಲೂರು, ಹೆರವನಾಡು ಮತ್ತು ಕಾರುಗುಂದ ಗ್ರಾಮಗಳ ರಸ್ತೆಗೆ ಭೂಮಿಪೂಜೆ ನೆರವೇರಿಸಿದರು.

ರಾಜ್ಯ ರೇಷ್ಮೆ ಮಾರುಕಟ್ಟೆ ನಿಗಮದ ಅಧ್ಯಕ್ಷರಾದ ಟಿ.ಪಿ.ರಮೇಶ್, ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದಕೊಲ್ಯದ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಕಲ್ ರಮಾನಾಥ್, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಾಪಂಡ ಗಣೇಶ್, ಮಾಜಿ ವಲಯಾಧ್ಯಕ್ಷರಾದ ಕೇಟೋಳಿ ಮೋಹನ್ ರಾಜ್,  ಡಿಸಿಸಿ ಸದಸ್ಯೆ ಬಿದ್ದಂಡ ಸುಮಿತಾ ಮಾದಪ್ಪ,ಮಾಜಿ ಮಂಡಲ ಪ್ರಧಾನರಾದ ಚಿಕ್ಕು ಕಾರ್ಯಪ್ಪ, ಹಿರಿಯರಾದ ನೈಯಣಿರ ಗೋಪಾಲ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹನೀಫ್ ಸಂಪಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದಶಾಂತಿ, ಸದಸ್ಯರಾದ ತೆನ್ನೀರ ರಮೇಶ್ ಸರಸ್ವತಿ, ಆಶಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಗಲಿದ ಮಾಜಿಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ಸಭೆ ಸಂತಾಪ ಸೂಚಿಸಿತು. ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಾಪಂಡ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತೆನ್ನಿರ ಮೈನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತೆನ್ನಿರ ರಮೇಶ್ ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News