ಪ್ರತ್ಯೇಕ ಮೂರು ಅಪಘಾತ ಪ್ರಕರಣ: ಐವರ ಸಾವು
ತುಮಕೂರು.ಜು.31: ಜಿಲ್ಲೆಯಲ್ಲಿ ನಡೆದಿರುವ ಮೂರು ಪ್ರತ್ಯೇಕ ಘಟನೆಗಳಲ್ಲಿ 5 ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಬೆಸ್ಕಾಂನ ಸಿಬ್ಬಂದಿಯ ನಿರ್ಲಕ್ಷದಿಂದ ಲೈನ್‌ಮನ್ ಓರ್ವ ಸಾವನ್ನಪ್ಪಿದ್ದಾನೆ. ಸಿದ್ದರಾಜು(27) ಸಾವಿಗೀಡಾದ ಮಾರ್ಗದಾಳುವಾಗಿದ್ದಾನೆ. ಗುಬ್ಬಿ ತಾಲೂಕು ಪುರ ಗ್ರಾಮದಲ್ಲಿ ವಿದ್ಯುತ್ ಲೈನ್ ದುರಸ್ತಿ ಪಡಿಸುವ ವೇಳೆ ಲೈನ್ ಚ್ಫರ್ಜ್ ಆಗಿದ್ದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಗ್ರಾಮಾಂತರದ ಹೊನ್ನುಡಿಕೆಗೆ ಬಳಿ ಕ್ವಾಲಿಸ್ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಕಾರಣ ತಂದೆ, ಮಗ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜರುಗಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ತುಮಕೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್ ಮತ್ತು ಅವರ ಪುತ್ರ ಜೀವನ್ ಎಂದು ಗುರುತಿಸಲಾಗಿದೆ. ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಮಗನಿಗೆ ತುಮಕೂರು ನಗರಕ್ಕೆ ಕರೆದುಕೊಂಡು ಬರಲು ತಮ್ಮ ಕ್ವಾಲಿಸ್ ವಾಹನದಲ್ಲಿ ಬರುತ್ತಿರುವಾಗ ಎಸ್.ಆರ್.ಎಸ್. ಬಸ್ ನರುಗನಹಳ್ಳಿ ಕ್ರಾಸ್ ಬಳಿ ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಸ್ಪತ್ರೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನ ಆಗಮಿಸಿದ್ದರು.
ಕೊರಟಗೆರೆ ತಾಲೂಕಿನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಖಾಸಗಿ ಬಸ್ಸೊಂದು ಬ್ರೇಕ್‌ಫೈಲ್ ಆಗಿ ರಸ್ತೆ ಬದಿಯ ಬೇಕರಿಗೆ ನುಗ್ಗಿದ ಪರಿಣಾಮ ಬಸ್ಸಿನಲ್ಲಿದ್ದ ಲಕ್ಷ್ಮಮ್ಮ(50) ಮತ್ತು ಬೇಕರಿಯ ಮಾಲೀಕ ಕುಮಾರ್ ಸಾವನ್ನಪ್ಪಿದ್ದಾರೆ. ಲಕ್ಷ್ಮಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಕುಮಾರ್ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮೃತಪಟ್ಟಿದ್ದಾರೆ. ಬಸ್ಸು ಕೊಳ್ಳಾಲದಿಂದ ಬೆಂಗಳ್ರರಿಗೆ ಹೊರಟಿತ್ತು. ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ