×
Ad

ಅಹೋರಾತ್ರಿ ಧರಣಿ 24ನೆ ದಿನಕ್ಕೆ

Update: 2017-07-31 20:17 IST

ಮದ್ದೂರು, ಜು.31: ನಾಲೆಗಳಿಗೆ ನೀರುಹರಿಸಲು ಒತ್ತಾಯಿಸಿ ಸಮೀಪದ ದೇಶಹಳ್ಳಿ ಕೆರೆಯಂಗಳದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 24ನೆ ದಿನಕ್ಕೆ ಕಾಲಿಟ್ಟಿದೆ.

ದೇಶಹಳ್ಳಿ, ವಳಗೆರೆಹಳ್ಳಿ, ಚಾಮನಹಳ್ಳಿ ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರದ ಧರಣಿಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಧರಣಿಗೆ ಸರಕಾರ ಕಿವಿಗೊಡದ ಹಿನ್ನೆಲೆಯಲ್ಲಿ ನಾಳೆ (ಆ.1) ಧರಣಿ ಸ್ಥಳದಲ್ಲಿ ಮುಖ್ಯಮಂತ್ರಿ, ನೀರಾವರಿ ಸಚಿವರ ಅಣಕು ಶ್ರಾದ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದ್ದಾರೆ.
ಗ್ರಾಪಂ ಸದಸ್ಯ ಸುರೇಶ್, ಮಾಜಿ ಸದಸ್ಯ ಡಿ.ಎಂ.ಶಂಕರ್, ಚಾಮನಹಳ್ಳಿ ರಾಮಯ್ಯ, ರವಿ, ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಮಲ್ಲರಾಜು, ಗುಂಡ ಮಹೇಶ್, ಚಂದ್ರು, ಭೈರ, ಜಯರಾಮು, ಕುದರುಗುಂಡಿ ಸಿದ್ದೇಗೌಡ, ಇತರರು ಧರಣಿಯಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News