ಹನೂರು: ಸುಧಾರಿತ ಗಸ್ತು ವ್ಯವಸ್ಥೆಯ ನಾಗರೀಕ ಸದಸ್ಯರ ಸಭೆ

Update: 2017-08-01 12:16 GMT

ಹನೂರು, ಆ.1: ನೂತನವಾಗಿ ಪೊಲೀಸ್ ಬೀಟ್ ವ್ಯವಸ್ಥೆಮಾಡಲಾಗಿದ್ದು, ಇದನ್ನು ಜನಸ್ನೇಹಿ ಪೋಲಿಸರನ್ನಾಗಿ ಮಾಡುವುದ ಕ್ಕೋಸ್ಕರ ಪ್ರತಿಯೊಂದು ಗ್ರಾಮಗಳಿಗೂ ಒಬ್ಬ ಪೋಲಿಸ್‌ರನ್ನು ನೇಮಕ ಮಾಡಲಾಗಿದೆ. ಇದ್ದನ್ನು ಸದುಪಯೋಗ ಪಡಸಿಕೊಂಡು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ನೀಡಬೇಕೆಂದು  ಕೊಳ್ಳೇಗಾಲ ಉಪವಿಭಾಗದ ಅಧೀಕ್ಷಕ ಪುಟ್ಟಮಾದಯ್ಯ ತಿಳಿಸಿದರು.

ರಾಮಪುರ ಗ್ರಾಮದ ಮಹದೇಶ್ವರ ಭವನದಲ್ಲಿ ಏರ್ಪಡಿಸಿದ್ದ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಸುಧಾರಿತ ಗಸ್ತು ವ್ಯವಸ್ಥೆಯ ನಾಗರೀಕ ಸದಸ್ಯರ ಸಭೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಹೊಸ ಪೊಲೀಸ್ ಬೀಟ್ ವ್ಯವಸ್ಥೆಯಿಂದ ಪೊಲೀಸರ ಹಾಗೂ ಜನಸಾಮಾನ್ಯರ ಜೊತೆ ಬೆರೆತು ಗಸ್ತು ವ್ಯವಸ್ಥೆಯ ಮೂಲಕ ನಿವಾಸಿಗಳು ಬೀಟ್ ಪೊಲೀಸರಿಗೆ ನಿಮ್ಮಲ್ಲಿ ನಡೆಯುವ ಕಾನೂನು ಬಾಹಿರ ಅಕ್ರಮ ಚಟುವಟಿಕೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಬೀಟ್ ಸದಸ್ಯರು ಮಾಹಿತಿಗಳನ್ನು ಪೊಲೀಸರಿಗೆ ತಿಳಿಸಿದರೆ, ಮುಂದೆ ನಡೆಯುವ ಆಕ್ರಮ ಚಟುವಟಿಕೆ ಹಾಗೂ ಅನಾಹುತಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ. ನಿಮ್ಮ ಮನೆ ಬಾಗಿಲಿಗೆ ಬರುವ ಪೊಲೀಸರಿಗೆ ಸಮಗ್ರ ಮಾಹಿತಿಯೊಂದಿಗೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಪೊಲೀಸರು ಸ್ಪಂಧಿಸದಿದ್ದಲ್ಲಿ ಹಿರಿಯ ಅಧಿಕಾರಗಳ ಗಮನಕ್ಕೆ ತಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
  
ಹನೂರು ಸರ್ಕಲ್ ವೃತ್ತ ನೀರಿಕ್ಷಕರಾದ ಶಿವಸ್ವಾಮಿ ಮಾತನಾಡಿ, ಸಾರ್ವಜನಿಕರು ಮತ್ತು ಪೋಲಿಸರ ನಡುವೆ ಉತ್ತಮ ಭಾಂದವ್ಯ ಬೆಳಸುವ ನಿಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ 1500 ಜನಸಂಖ್ಯೆಗೆ ಒಬ್ಬ ಪೋಲಿಸರಂತೆ ವಿಂಗಡಣೆ ಮಾಡಲಾಗಿದೆ. ಹಿಂದೆ ಇದ್ದ 8 ಬೀಟ್‌ಗಳನ್ನು .ಪ್ರಸ್ತುತ ಸಂದರ್ಭದಲ್ಲಿ 49 ಬೀಟ್‌ಗಳನ್ನಾಗಿ ಮಾಡಿ. ಸಾರ್ವಜನಿಕರಿಗೆ  ಉತ್ತಮ ರೀತಿಯಲ್ಲಿ ಸೇವೆ ನೀಡುವ ನಿಟ್ಟಿನಲ್ಲಿ  ಕಳೆದ ಎರಡು ತಿಂಗಳಿಂದ ಪ್ರತಿ ಗ್ರಾಮದಲ್ಲೂ ಪೋಲಿಸದ್ ಭೀಟ್ ವ್ಯವಸ್ಥೆಯನ್ನು ಮಾಡಲಾಗಿದೆ  ಎಂದರು.

ಅಜ್ಜಿಪುರ ಗ್ರಾಮದ ಮಾದೇವ ಎಂಬುವವರು ಮಾತನಾಡಿ, ಪೋಲಿಸ್ ಇಲಾಖೆ ನೂತನವಾದ ಬೀಟ್ ವ್ಯವಸ್ಥೆ ಬಂದ ಮೇಲೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಸಮಸ್ಯಗಳನ್ನು ಹೇಳಿಕೊಳ್ಳಬಹುದಾಗಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಠಾಣೆ ವ್ಯಾಪ್ತಿಗಳಲ್ಲಿ ಬರುವ ಮದ್ಯವರ್ತಿಗಳ ಹಾವಳಿಗಳನ್ನು ತಪ್ಪಿಸಬಹುದು ಎಂದರು.
    
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News