ಕೆಆರ್‌ಎಸ್ ಒತ್ತುವರಿ ತೆರವಿಗೆ ಒತ್ತಾಯ
Update: 2017-08-01 18:27 IST
ಮಂಡ್ಯ, ಆ.1: ಕನ್ನಂಬಾಡಿ ಕಟ್ಟೆಯ ಹಿನ್ನೀರಿನ ಸುತ್ತಮುತ್ತ ಉಳ್ಳವರು ಒತ್ತುವರಿ ಮಾಡಿ ಕೊಂಡಿದ್ದು, ಜಿಲ್ಲಾಡಳಿತ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಹಿನ್ನೀರಿನ ಸುತ್ತಮುತ್ತಲೂ ಹಣ ಉಳ್ಳವರು ಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಹೆಚ್ಚಿನ ನೀರು ಸಂಗ್ರಹಕ್ಕೆ ತೊಂದರೆಯಾಗಿದೆ ಎಂದು ಅವರು ಆರೋಪಿಸಿದರು.
ಸರಕಾರ ಕೆರೆ-ಕಟ್ಟೆಗಳನ್ನು ಹೂಳು ತೆಗೆಸಲು ಮಾತ್ರ ಹಣ ಬಿಡುಗಡೆ ಮಾಡಿದ್ದು, ಹೂಳನ್ನು ಬೇರೆಡೆ ಸಾಗಿಸಲೂ ಹಣ ಬಿಡುಗಡೆ ಮಾಡಬೇಕು. ಜಲಾಶಯದಿಂದ ನಾಲೆಗಳಿಗೆ ನೀರುಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಿದ್ದರಾಜುಗೌಡ, ಶಿವಕುಮಾರ್, ವರದರಾಜು, ರಾಜು, ಕಷ್ಣ, ಗುರುಮಲ್ಲೇಶ್, ವೀರಭದ್ರಸ್ವಾಮಿ, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.