ವೀರಶೈವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಿದ್ಯಾಥಿನಿಯರ ಸಂದರ್ಶನ
ಕಡೂರು, ಆ.1: ವೀರಶೈವ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯಗಳನ್ನು ರಾಜ್ಯಾದಾಧ್ಯಂತ ಗುಬ್ಬಿ ತೋಟದಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗಿದೆ ಎಂದು ಟ್ರಸ್ಟ್‌ನ ಸದಸ್ಯ ರಾಜಶೇಖರ್‌ಶಾಸ್ತ್ರಿ ಹೇಳಿದರು.
ಅವರು ಪಟ್ಟಣದ ವೀರಶೈವ ಕ್ಷೇಮಾಭಿವೃದ್ದಿ ಸಂಘ ಮತ್ತು ಗುಬ್ಬಿತೋಟದಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ವೀರಶೈವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ 2017-18ನೇ ಸಾಲಿಗೆ ವಸತಿ ನಿಲಯಕ್ಕೆ ಸೇರ್ಪಡೆಗೊಳ್ಳುವ ವಿದ್ಯಾಥಿನಿಯರ ಸಂದರ್ಶನ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು.
ಈ ವಸತಿ ನಿಲಯದ ಪೂರ್ಣ ಖರ್ಚು-ವೆಚ್ಚವನ್ನು ಟ್ರಸ್ಟ್ ವತಿಯಿಂದ ನಿಡಲಾಗುವುದು. ಈ ನಿಲಯಕ್ಕೆ ಬರುವ ವಿದ್ಯಾರ್ಥಿನಿಯರು ಯಾವುದೇ ಶುಲ್ಕವನ್ನು ನೀಡುವಂತಿಲ್ಲ. ಇದು ಗುಬ್ಬಿ ತೋಟದಪ್ಪ ಅವರ ಟ್ರಸ್ಟ್ ನಡೆಸುತ್ತಿರುವ ಉಚಿತ ವಸತಿ ನಿಲಯಗಳು. ಈ ಟ್ರಸ್ಟ್ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ತಲಕಾಡು, ಕೊಳ್ಳೇಗಾಲ, ಚಾಮರಾಜನಗರ, ಕೊಟ್ಟುರು, ಬಳ್ಳಾರಿ, ಸಿಂಗಿ, ರಾಯಚೂರು ಗದಗ್, ಶಿವಮೊಗ್ಗ ಮತ್ತು ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಕಡೂರು ಪಟ್ಟಣದಲ್ಲಿ 2012ರಿಂದ ಈ ವಸತಿ ನಿಲಯ ಪ್ರಾರಂಭವಾಗಿದ್ದು. ಯಾವುದೇ ಲೋಪಗಳಿಲ್ಲದೆ ಉತ್ತಮವಾಗಿ ನಡೆಯುತ್ತಿದೆ. ಈ ವಸತಿ ನಿಲಯ ಸ್ಥಾಪಕರಾದ ದಿ. ಪಿ.ಕೆ. ರೇವಣ್ಣಯ್ಯ ಅವರ ಪ್ರಯತ್ನದಿಂದ ಪಟ್ಟಣದಲ್ಲಿ ನಿಲಯ ಪ್ರಾರಂಭವಾಯಿತು ಎಂದ ಅವರು, ನಂತರ ಅಧ್ಯಕ್ಷರಾಗಿದ್ದ ದೇವರಾಜು ಮತ್ತು ಕಾರ್ಯದರ್ಶಿಯಾಗಿದ್ದ ರೇಣುಕಾರಾಧ್ಯ ಕೂಡ ಉತ್ತಮ ರೀತಿಯಲ್ಲಿ ಈ ವಸತಿ ನಿಲಯವನ್ನು ನಡೆಸಿಕೊಂಡು ಬರುತ್ತಿದ್ದರು ಎಂದು ಹೇಳಿದರು. ದೇವರಾಜು ಮತ್ತು ರೇಣುಕಾರಾಧ್ಯ ಅವರು ಅಪಘಾತದಲ್ಲಿ ನಿಧನರಾಗಿದ್ದು, ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಟ್ರಸ್ಟ್ ವತಿಯಿಂದ ಒಂದು ನಿಮಿಷ ಮೌನಚಾರಣೆ ನಡೆಸಲಾಯಿತು.
ಈ ಸಂದರ್ಭ ವೀರಶೈವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್(ಬೋರ್‌ಬಾಬು) ಗುಬ್ಬಿ ತೋಟದಪ್ಪ ಟ್ರಸ್ಟಿನ ನಿರ್ದೇಶಕ ಪರಮಶಿವು, ವೀರಶೈವ ಕ್ಷೇಮಾಭಿವೃದ್ದಿ ಸಂಘದ ಕಾಂತರಾಜು, ಮರುಳಸಿದ್ದಪ್ಪ, ಗಂಗಾಧರಯ್ಯ, ಶಾಂತಕುಮಾರ್ ಉಪಸ್ಥಿತರಿದ್ದರು