×
Ad

ಗುಂಡಿಕ್ಕಿ ಪರಾರಿಯಾಗಿದ್ದ ಆರೋಪಿಗಳ ಬಂಧನ

Update: 2017-08-01 20:32 IST

ಹನೂರು, ಆ.1: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವ ಮೇಲೆ ನಾಡ ಬಂದೂಕಿನಿಂದ ಗುಂಡಾರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ  ಹಾಜರು ಪಡೆಸಿದ್ದಾರೆ.

ಕುರಟ್ಟಿಹೂಸರು ಗ್ರಾಮದ ಸಿದ್ದರಾಜು (38) ಹಾಗೂ ಮುನಿಯಾ(45) ಬಂಧಿತ ಅರೋಪಿಗಳು. ಹನೂರು ಸಮೀಪದ ಕುರಟ್ಟಿ ಹೊಸರು ಗ್ರಾಮದ ಕೃಷ್ಣ ಬಿನ್ ಕಾಳಯ್ಯ ಶೆಟ್ಟಿ ಎಂಬ ವ್ಯಕ್ತಿಯ ಮೇಲೆ ಹಣಕಾಸಿನ ವಿಷಯಕ್ಕೆ ಜಗಳವಾಗಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು.

ಈ ಸಂಬಂಧ ರಾಮಪುರ ಪೋಲಿಸರು ಪ್ರಕರಣ ದಾಖಿಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು. ಆರೋಪಿಗಳನ್ನು ಬೆಂಗಳೂರಿನ ಕೆಂಗೇರಿ ಬಳಿ ಬಂಧಿಸಿ ನ್ಯಾಯಲಕ್ಕೆ ಒಪ್ಪಿಸಿದ್ದಾರೆೆ. ಉಳಿದಿರುವ ಇನ್ನೂಬ್ಬ ಆರೋಪಿಯಾದ ರವಿಯ ಪತ್ತೆಗಾಗಿ ಬಲೆ ಬಿಸಿದ್ದಾರೆ.

ಕಾರ್ಯಚರಣೆಯಲ್ಲಿ ರಾಮಪುರ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ಶ್ರೀಧರ್ ಮತ್ತು ಸಿಬ್ಬಂದಿವರ್ಗ ಬಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News