×
Ad

ಬಿಎಸ್‌ಎನ್‌ಎಲ್ ಉತ್ಸವ-2017ಕ್ಕೆ ಚಾಲನೆ

Update: 2017-08-01 20:36 IST

ಹಾಸನ, ಆ.1: ಹೊಸ ಲ್ಯಾಂಡ್‌ಲೈನ್, ಬ್ರಾಂಡ್‌ಬ್ಯಾಡ್, ಎಫ್‌ಟಿಟಿಹೆಚ್ ಮತ್ತು ಮರು ಸಂಪರ್ಕ ಬಿಎಸ್‌ಎನ್‌ಎಲ್ ಉತ್ಸವ-2017ಕ್ಕೆ ಅಂಚೆ ಇಲಾಖೆ ಮುಖ್ಯ ಅಧಿಕಾರಿ ಸದಾನಂದ್ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಹಿಂದೆ ಟೆಲಿಪೋನ್ ಎಂಬುವುದು ಹೆಚ್ಚಿನ ರೀತಿ ಚಾಲ್ತಿಯಲ್ಲಿತ್ತು. ಇಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಎಂಬ ಮಾತು ಬರುತ್ತಿದೆ. ಅಂದು ಸ್ಪರ್ದೆ ಎಂಬುದು ಇರಲಿಲ್ಲ. ಇಂದಿನ ದಿನಗಳಲ್ಲಿ ಅನೇಕ ನೆಟ್‌ವರ್ಕ್ ಇರುವುದರಿಂದ ಸ್ಪರ್ದೆ ಹೆಚ್ಚಾಗಿದೆ ಎಂದರು. ಅಂದಿನಿಂದ ಇಂದಿನವರೆಗೂ ಅಂಚೆ ಮತ್ತು ಬಿಎಸ್‌ಎನ್‌ಎಲ್ ಬಾಂಧ್ಯವ್ಯ ಉತ್ತಮವಾಗಿದೆ. ಅಂಚೆಯಲ್ಲಿ ಬಹುತೇಕ ಎಲ್ಲಾ ಸಂಪರ್ಕ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಆಗಿದೆ. ನಿಮಗೆ ದೊಡ್ಡ ಗ್ರಾಹಕ ಎಂದರೇ ಅಂಚೆ ಇಲಾಖೆ ಎಂದು ಕಿವಿಮಾತು ಹೇಳಿದರು. ಅಂಚೆ ಇಲಾಖೆ ಕೂಡ ಇಂದಿನ ದಿನಕ್ಕೆ ಹೊಂದಿಕೊಂಡು ಅಭಿವೃದ್ಧಿಗೊಂಡಿದೆ. 24 ಗಂಟೆಗಳ ಎಟಿಎಂ ಕೂಡ ಪ್ರಾರಂಭಿಸಲಾಗಿದೆ. ಎಲ್ಲಾ ಅಂಚೆ ಕಛೇರಿಯು ಆನ್‌ಲೈನ್ ಮೂಲಕವೇ ನಡೆಯುತ್ತಿದೆ ಎಂದು ಇದೆ ವೇಳೆ ಹಿಂದಿನ ನೆನಪನ್ನು ಇದೆ ವೇಳೆ ನೆನಪಿಸಿಕೊಂಡರು.


ನಾಗರಾಜು ಮಾತನಾಡಿ, ವಾಣಿಜ್ಯ ಪ್ರಪಂಚದಲ್ಲಿ ಸ್ಪರ್ದೆ ಎಂಬುದು ಹೆಚ್ಚು ಕಾಣಬಹುದು. ಬಿಎಸ್‌ಎನ್‌ಎಲ್ ಉತ್ಸಹದ ಉದ್ದೇಶ ಗ್ರಾಹಕರಿಗೆ ನಮ್ಮ ನೆಟ್‌ವಕ್‌ನಿಂದ ಹೆಚ್ಚಿನ ಲಾಭ ನೀಡುವುದು ಆಗಿದೆ. 15 ದಿನಗಳ ಕಾಲ ಇಂತಹ ಯೋಜನೆಯನ್ನು ಹಮ್ಮಿಕೊಂಡಿದ್ದು, ಗ್ರಾಹಕರಿಗೆ ಇದರ ಪ್ರಯೋಜನವನ್ನು ತಿಳಿಸುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೇರೆ ಕೆಲಸ ಬಿಟ್ಟು ಸ್ಕೀಂ ಬಗ್ಗೆ ಮಾಕೇಟಿಂಗ್ ಮಾಡಬೇಕು ಎಂದು ಸಲಹೆ ನೀಡಿದರು. ಎಲ್‌ಐಟಿ ಆಸ್ತಿ ಹೆಚ್ಚು ಬಿಟ್ಟರೇ ಬಿಎಸ್‌ಎನ್‌ಎಲ್ ಬಳಿ ಇದ್ದು, ಉಳಿಸುವ ನಿಟ್ಟಿನಲ್ಲಿ ಇರುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಬೇರೆಯವರೆಗೂ ಅದರ ಅವಕಾಶ ಕೊಡಬೇಕು ಎಂದು ಕರೆ ನೀಡಿದರು.

ಇದೆ ವೇಳೆ ಬಿಎಸ್‌ಎನ್‌ಎಲ್‌ನ ಜೋಷಿ, ತಿರುಮಲದೇವಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News