×
Ad

ತಮ್ಮ ಮಕ್ಕಳಂತೆ ಗಿಡಗಳನ್ನು ಪೋಷಿಸಿ

Update: 2017-08-01 20:49 IST

ಮುಂಡಗೋಡ, ಆ.1; ಪ್ರತಿಯೊಂದು ಕುಟುಂಬದವರು ತಮ್ಮ ಮಕ್ಕಳಂತೆ ಗಿಡಗಳನ್ನು ಪೋಷಿಸಿ ಅವುಗಳ ರಕ್ಷಣೆ ಮಾಡಿದರೆ ವನಮಹೋತ್ಸವ ಮಾಡಿದ್ದಕ್ಕೆ ಸಾರ್ಥಕವಾಗುವುದು ಎಂದು ಪಟ್ಟಣ ಪಂಚಾಯತಿ ಸದಸ್ಯರಾದ ಜ್ಯೋತಿ ನಾಗರಾಜ ಕಲಾಲ ಹೇಳಿದರು.

ಅವರು ಮ್ಯತ್ಯುಂಜಯ ಸಮಗ್ರ ಅಭಿವೃದ್ಧಿ ಸಂಸ್ಥೆ-ಮುಂಡಗೋಡ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ನ್ಯಾಸರ್ಗಿ ಪ್ಲಾಟ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಗಿಡಮರಗಳು ಮನುಷ್ಯನ ಜೀವನಾಡಿ. ಮನುಷ್ಯ ಸುಖವಾಗಿ ನೆಮ್ಮದಿಯಿಂದ ಜೀವಿಸಬೇಕಾದರೆ ಆಮ್ಲಜನಕ ಬಹಳ ಮುಖ್ಯ. ಆದುದರಿಂದ ಗಿಡ ನೆಡುವುದು ಅವುಗಳ ಪೋಷಣೆ ಮಾಡುವುದು ಮನುಷ್ಯನಿಗಾಗಿ ಎಂದು ತಿಳಿಯಬೇಕು. ಹಾಗೂ ಗಿಡಗಳು ಸಮೃದ್ಧಿಯಿಂದ ಕೂಡಿದರೆ ಮಳೆ,ಬೆಳೆ, ಜಾನುವಾರುಗಳು, ಕೆರೆ-ಕಟ್ಟಿಗಳು ತುಂಬಿ ಅಂತರ್ಜಲ ಹೆಚ್ಚಾಗುವುದು ಎಂದು ಹೇಳಿದರು.

ವಲಯ ಉಪ ಅರಣ್ಯಾಧಿಕಾರಿಗಳು ಡಿ.ಬಿ.ಪಠಾಣ ಮಾತನಾಡಿ, ನಮ್ಮ ಇಲಾಖೆಯು ಸರಕಾದ ಮಾರ್ಗದರ್ಶನದಂತೆ ಸಸಿ ಪೋಷಿಸಿ ರೈತರಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಕಾಡನ್ನು ಸಮೃದ್ದಿ ಪಡಿಸಲು ವನಮಹೋತ್ಸವ ಕಾರ್ಯಕ್ರಮ ಮಾಡುತ್ತಿದೆ. ಕೇವಲ ಗಿಡ ನೆಟ್ಟರ ಸಾಲದು, ಗಿಡವನ್ನು ಸರಿಯಾಗಿ ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ವನಗಳ ಬಗ್ಗೆ ಗಿಡಗಳ ಬಗ್ಗೆ ತಿಳಿಯಲು ಅನುಕೂಲವಾಗುವುದು. ನಿಮ್ಮ ಸ್ವಯಂಕೃತ ಉಪಯೋಗಕ್ಕೆ ಗಿಡ ಕಡಿದರೆ ಕಾಡು ನಾಶವಾಗುವುದು. ಆದ್ದರಿಂದ ಪ್ರತಿಯೊಬ್ಬರು ಗಿಡ ನೆಟ್ಟು ಪೊಸಿಸಿ ಕಾಡನ್ನು ಉಳಿಸಿ ಬೆಳಸಿರಿ ಎಂದು ಹೇಳಿದರು.

ಮೃತ್ಯುಂಜಯ ಸಂಸ್ಥೆಯ ನಿರ್ದೇಶಕರಾದ ಎಲ್ ನರಸಿಂಹಮೂರ್ತಿ, ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದಂತಹ ಶಾಂತವ್ವ ಮಾತನಾಡಿದರು. ಇಂದೂರ ಉಪ ವಲಯ ಅರಣ್ಯಾಧಿಕಾರಿಗಳು ಬಸವರಾಜ ಪೂಜಾರ ಮತ್ತು ಶಾಲೆಯ ಸಮಿತಿಯ ಪದಾಧಿಕಾರಿಗಳು ಸದಸ್ಯರು ಮತ್ತು ಶಾಲೆಯ ಮುಖ್ಯೋಪಾದ್ಯಾಯರು ಸಹಶಿಕ್ಷಕರು ಮಕ್ಕಳ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News