ದಸಂಸದಿಂದ ಧರಣಿ ಸತ್ಯಾಗ್ರಹ
ದಾವಣಗೆರೆ, ಆ.2: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗ್ರಾಮದ ಪರಿಶಿಷ್ಟ ಜಾತಿ, ಆದಿ ಕರ್ನಾಟಕ ಜಾತಿಗೆ ಸೇರಿದ ದುಗ್ಗತ್ತಿ ಉಚ್ಚಂಗೆಪ್ಪ ಮತ್ತಿತ್ತರರಿಗೆ ಬಗರ್ ಹುಕ್ಕುಂ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗ ಗ್ರಾಮದ ಸವೇ ನಂಬರ್ 441/ಎ2ರಲ್ಲಿ ಬಗರ್ ಹುಕ್ಕುಂ ಸಾಗುವಳಿಗೆ ಫಾರಂ ನಂ.53ರಲ್ಲಿ ಅರ್ಜಿ ಸಲ್ಲಿಸಿರುವ ದುಗ್ಗತ್ತಿ ಉಚ್ಚಂಗೆಪ್ಪ ಇವರಿಗೆ ಸಾಗುವಳಿ ಹಕ್ಕು ಪತ್ರ ವಿತರಬೇಕು. ದೌರ್ಜನ್ಯ ದಬ್ಬಾಳಿಕೆಯಿಂದ ದುಗ್ಗತ್ತಿ ಉಚ್ಚಂಗೆಪ್ಪ ಇವರು ಸಾಗುವಳಿ ಮಾಡುತ್ತಾ ಬಂದಿದ್ದ 7.20 ಎಕರೆ ಕಲ್ಲುಗಣಿ ಗುತ್ತಿಗೆ ಪಡೆದಿರುವ ಮಾಲೀಕರ ವಿರುದ್ಧ ಕಾನೂನ ಕ್ರಮ ಕೈಗೊಲ್ಳಬೇಕು ಎಂದು ಆಗ್ರಹಿಸಿದರು.
ಜಾತಿ ಮತ್ತು ರಾಜಕೀಯ ಒತ್ತಡದ ಪ್ರಭಾವದಿಂದ ಫಾರಂ ನಂ.53ರಲ್ಲಿ ಅರ್ಜಿ ಸಲ್ಲಿಸಿದ್ದರೂ ಕೂಡ ಕ್ರಷರ್ ಕಲ್ಲು ಗುತ್ತಿಗೆಯ ಅನುಮತಿಗೆ ಪರವಾನಿಗೆ ನೀಡಿರುವುದುನ್ನು ಕೂಡಲೇ ರದ್ದುಪಡಿಸಬೇಕು. ಪರಿಶಿಷ್ಟ ಜಾತಿಗೆ ಸೇರಿದ ದುಗ್ಗತ್ತಿ ಉಚ್ಚಂಗೆಪ್ಪ ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ಬೇರೆಯವರಿಗೆ ಕಲ್ಲುಗಣಿ ಗುತ್ತಿಗೆಯ ಅನುಮತಿ ನೀಡಿರುವುದನ್ನು ಪರಿಶಿಷ್ಟ ಜಾತಿಗಳವರ ಮೇಲಿನ ದೌರ್ಜನ್ಯ ಎಂದು ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಡಿ.ಹನುಮಂತಪ್ಪ, ಸಂಯೋಜಕ ಬಸವರಾಜು ಸಿದ್ದನೂರು, ದುಗ್ಗತ್ತಿ ಉಚ್ಚೆಂಗಪ್ಪ, ಎಚ್.ಮಲ್ಲೇಶ್ ಮತ್ತಿತರರು ಇದ್ದರು.