ಗಣಪತಿ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥನೆ
Update: 2017-08-02 19:52 IST
ಚಿಕ್ಕಮಗಳೂರು, ಆ.2: ನಗರದ ಶ್ರೀ ಕಾಮಧೇನು ಗಣಪತಿ ಕ್ಷೇತ್ರದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ, ಹೋಮ ಹವನ ನಡೆಸಲಾಯಿತು.
ಕ್ಷೇತ್ರದ ಮೃತ್ಯುಂಜಯ ಶ್ರೀಕಂಠೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಪರ್ಜನ್ಯಾಭಿಷೇಕ ನಡೆಸಲಾಯಿತು, ನಂತರ ಪ್ರಧಾನ ಅರ್ಚಕ ರಘುನಾಥ್ ಅವದಾನಿ ಅವರ ನೇತೃತ್ವದಲ್ಲಿ ರುದ್ರಹೋಮ ಗಣಪತಿ ಹೋಮ, ಮಾರುತಿ ಹೋಮ ಮತ್ತು ಪರ್ಜನ್ಯ ಹೋಮ ನಡೆಯಿತು.
ನಗರಸಭೆ ಆಯುಕ್ತೆ ತುಷಾರಮಣಿ ಪೂರ್ಣಾಹುತಿ ನೆರವೇರಿಸಿದರು, ಇದೇ ವೇಳೆ ಭಕ್ತರಿಂದ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.