ವಿವಿಧ ಗ್ರಾಮಗಳಿಗೆ ರವಿಶಂಕರ್ ಗುರೂಜಿ ಭೇಟಿ

Update: 2017-08-02 15:43 GMT

ಚಿಕ್ಕಮಗಳೂರು ಆ.2: ವೇದಾವತಿ ನದಿ ಪುನಶ್ಚೇತನ ಕಾಮಗಾರಿಗಳನ್ನು ವೀಕ್ಷಿಸಲು ಚಿಕ್ಕಮಗಳೂರಿಗೆ ಬಂದಿಳಿದ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿಯವರನ್ನು ಎಂ.ಜಿ.ರಸ್ತೆಯಲ್ಲಿ ವಿವಿಧ ಗಣ್ಯರು ಸ್ವಾಗತಿಸಿ ಮೆರವಣಿಗೆ ನಡೆಸಿದರು.
 
ನಂತರ ಗುರೂಜಿಯವರು ಲಕ್ಯಾ ಹೋಬಳಿಯಲ್ಲಿ ವೇದಾವತಿ ನದಿ ಪುನಶ್ಚೇತನದ ಕಾಮಗಾರಿಯನ್ನು ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಸರ್ಕಾರದ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡು ಅನುಷ್ಠಾನಗೊಳಿಸಿದ್ದನ್ನು ನದಿ ಪಾತ್ರದ ಕಳಸಾಪುರ, ಸಿಂದಿಗೆರೆ, ಹುಲೀಕೆರೆ, ಲಕ್ಕಮ್ಮನಹಳ್ಳಿ. ಹಿರೇಗೌಜ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿದರು.  ಜನರಲ್ಲಿ ಜಲಜಾಗೃತಿ ಉಂಟು ಮಾಡುವ ಮೂಲಕ ನದಿ ಹಾಗೂ ಹಳ್ಳಗಳನ್ನು ರಕ್ಷಿಸಿ ಅಂತರ್ಜಲ ಸಮೃದ್ಧಿಗೊಳಿಸಲು ಸಾರ್ವಜನಿಕರನ್ನು ಸಜ್ಜುಗೊಳಿಸುವ ಬಗ್ಗೆ ಜಾಗೃಯಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಮಯದಲ್ಲಿ ಖ್ಯಾತ ಸಂಗೀತಗಾರ ವಾಸು ದೀಕ್ಷಿತ್, ಶಾಸಕ ಸಿ.ಟಿ.ರವಿ, ಎಂಎಲ್‌ಸಿ ಎಂ.ಕೆ.ಪ್ರಾಣೇಶ್, ಜಿಪಂ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ,ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾಧ್ಯಕ್ಷ ಶಂಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News