×
Ad

ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಒತ್ತಾಯ

Update: 2017-08-02 21:20 IST

ಚಿಕ್ಕಮಗಳೂರು, ಆ.2: ತಮ್ಮ ಮಗನ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ನಿರ್ಲಕ್ಷ್ಯತೋರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನುಸಿಬಿಐಗೆ ಹಸ್ತಾಂತರಿಸಲು ಮೃತ ಬಾಲಕನ ತಾಯಿ ದುಬೈ ನಗರ ಬಡಾವಣೆಯ ಅರ್ಷಿಯ ತಬಸಮ್ ವಸೀಂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಮಗ ಇತ್ತೀಚೆಗೆ ಶೇಕ್ ಅಬ್ದುಲ್ ಖಾದರ್  ಕೊಲೆಯಾಗಿದ್ದು, ಪೊಲೀಸರು ಅಸಹಜ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಕರಣವನ್ನು ಕೊಲೆ ಎಂದು ದಾಖಲಿಸಿಕೊಳ್ಳಲು ಪೊಲಿಸರು ನಿರಾಕರಿಸುತ್ತಿದ್ದಾರೆ. ಕಳೆದ ಜೂ.1 ರಂದು ಅಬ್ದುಲ್ ಖಾದರ್ ಕೆಲವು ಹುಡುಗರ ಜೊತೆ ಕ್ರಿಕೇಟ್ ಆಡಲು ಹೋಗಿ ಮನೆಗೆ ವಾಪಸ್ ಬಂದಿರಲಿಲ್ಲ. ಮರುದಿನ ಇನ್ನೊಬ್ಬ ಬಾಲಕ ಹೇಳಿದ್ದರಿಂದ ಸಿಡಿಎ ಬಡಾವಣೆಯ ಕೆರೆಯೊಂದರಲ್ಲಿ ಶವ ಮತ್ತೆಯಾಯಿತು ಎಂದರು.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿ ನಗರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣವೆಂದು ದಾಖಲು ಮಾಡಿಕೊಂಡಿದ್ದಾರೆ. ಶವದ ಮೇಲೆ ತೀವ್ರವಾಗಿ ಪೆಟ್ಟು ಬಿದ್ದ ಗುರುತುಗಳಿದ್ದವು. ಕೊಲೆಯಾಗಿರುವ ಶಂಕೆಯಿಂದ ದೂರು ನೀಡಿದರೂ ಪೊಲೀಸ್ರು ಕೊಲೆ ಮೊಖದ್ದಮೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿದರು.

ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಕೊಲೆ ಮೊಖದ್ದಮೆ ಹೂಡಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಎಸ್ಪಿಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸುಮಾರು 2 ತಿಂಗಳಿನಿಂದ ಪ್ರತಿನಿತ್ಯ ಪೊಲೀಸ್ ಠಾಣೆಗೆ ಹೋಗಿ ಕೇಳಿಕೊಂಡರೂ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ತಮ್ಮ ಗೋಳನ್ನು ತೋಡಿಕೊಂಡ ಅವರು, ತಮ್ಮ ಮಗನ ಸಾವಿನ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲದಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲು ಉದ್ದೇಶಿರುವುದಾಗಿ ತಿಳಿಸಿದರು.

ಮೃತ ಬಾಲಕನ ಕುಟುಂಬದವರಾದ ಖಾಜಾ ವಸೀಂ, ಮಹಮ್ಮದ್ ಅತೀಕ್, ಸೈಯದ್ ಪಾಝಿ, ಮುಬೀನಾಭೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News