×
Ad

ಕಿಸಾನ್ ಸಭಾ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಬ್ರಿಜೇಶ್ ಆಯ್ಕೆ

Update: 2017-08-03 18:19 IST

ಚಿಕ್ಕಮಗಳೂರು, ಆ.3: ಜಿಲ್ಲಾ ಕಾಂಗ್ರೆಸ್ ಸಮಿತಿ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗದ ಕಾರ್ಯ ಅಧ್ಯಕ್ಷರಾಗಿ ಬ್ರಿಜೇಶ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ತಿಳಿಸಿದಾರೆ.

ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆಯನ್ನು ಪ್ರಕಟಿಸಿ ಮಾತನಾಡಿ, ಕೆಪಿಸಿಸಿ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಜಿಲ್ಲಾ ಉಪಾಧ್ಯಕ್ಷರಾಗಿ ಬಲರಾಮ್ ಮತ್ತು ಪ್ರಕಾಶ್‌ರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪೃಥ್ವಿರಾಜ್ ಭಾಸ್ಕರ್‌ರನ್ನು ಹಾಗೂ ಜಿಲ್ಲಾ ಕಿಸಾನ್ ಅಧ್ಯಕ್ಷರಾಗಿ ರಾಘವೇಂದ್ರರನ್ನು ಮುಂದುವರಿಸಲಾಗಿದೆ.

ಹಿಂದಿನ ಪದಾಧಿಕಾರಿಗಳು ರೈತರಿಗೆ ಹಾಗು ಕೃಷಿ ಕಾರ್ಮಿಕರಿಗೆ ಸಹಾಯವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಜಿಲ್ಲೆಯಲ್ಲೂ ರೈತರಿಗೆ ಹಾಗು ಕೃಷಿ ಕಾರ್ಮಿಕರಿಗೆ ಸಹಾಯವಾಣಿಯಾಗಿ ಕಾರ್ಯನಿರ್ವಾಹನೆ ಮಾಡಲು ಈ ತಂಡದ ಜೊತೆಗೆ ಕಿಸಾನ್ ಜಿಲ್ಲೆಯ 227 ಗ್ರಾಮ ಪಂಚಾಯತ್ ಗೆ ಕಿಸಾನ್ ಅಧ್ಯಕ್ಷರನ್ನು ನೇಮಕಗೊಳಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲಾಧ್ಯಂತ ಪ್ರತಿ ಗ್ರಾಮ ಪಂಚಯತ್ ಗೆ ರೈತ ವಿಭಾಗದ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಈ ಘಟಕ ಬಾರಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲು ಸೀಮಿತವಾಗಿಲ್ಲ. ಈ ಘಟಕ ರೈತರ ಹಾಗು ಕೃಷಿ ಕಾರ್ಮಿಕರ ಸಂಕಷ್ಟಗಳಿಗೆ ಅಧ್ಯತೆ ನೀಡಿ ಅವರುಗಳ ಸಮಸ್ಯೆಯನ್ನು ಸರ್ಕಾರದ ಗಮನ ಹರಿಸಿ ಬಗೆಹರಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದೆ ಎಂದು ಸಚಿನ್ ಮೀಗಾ ಹೇಳಿದ್ದಾರೆ.
 ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ್ ಕುಮಾರ್, ಬ್ಲಾಕ್ ಅಧ್ಯಕ್ಷ ಮಂಜೇಗೌಡ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News