×
Ad

ವಂಚನೆ: ಆರೋಪಿಗೆ ಜೈಲು ಶಿಕ್ಷೆ

Update: 2017-08-03 18:21 IST

ಚಿಕ್ಕಮಗಳೂರು ಆ.3: ಮೋಸ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ 1 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ತೀರ್ಪು ನೀಡಿದೆ.
 
ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆಯ ಕೆ.ಎಸ್.ಚಂದ್ರೇಶ ಎಂಬಾತ ಗವನಹಳ್ಳಿ ಗ್ರಾಮದ ವಾಸಿಯಾದ ಆಶಾ ಕಾರ್ಯಕರ್ತೆ ಕುಶಾಲಕುಮಾರಿಯೊಂದಿಗೆ ಪರಿಚಯ ಬೆಳೆಸಿದ್ದ. ಆಕೆಗೆ ಸೇರಿದ ಹಳೆಯ ಮನೆಯನ್ನು ಕೆಡವಿ ಹೊಸದಾಗಿ ಮನೆಯನ್ನು ಕಟ್ಟಿಸಲು ಸಾಲ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಮೋಸದಿಂದ ಮನೆಯನ್ನು ತನ್ನ ಹೆಸರಿಗೆ ಕ್ರಯ ನೋಂದಣಿ ಮಾಡಿಕೊಂಡಿರುತ್ತಾನೆ.  ನಂತರ ಈ ವಿಷಯ ಗೊತ್ತಾಗಿ ಕುಶಾಲಕುಮಾರಿಯು ತನ್ನ ತಂದೆಯೊಂದಿಗೆ ಆರೋಪಿಯ ಮನೆಗೆ ಕೇಳಲು ಹೋದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯ ಬಳಿ ಬಂದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಕೆ.ಎಸ್.ಚಂದ್ರೇಶ ವಿರುದ್ಧ 420, 504, 506, ಐಪಿಸಿ ಅಡಿಯಲ್ಲಿ ಚಿಕ್ಕಮಗಳೂರು ಠಾಣೆ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ನೇ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್.ಹೆಗಡೆಯವರು ಆರೋಪಿ ಕೆ.ಎಸ್.ಚಂದ್ರೇಶನಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 15,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.  ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಘವೇಂದ್ರ ರಾಯ್ಕರ್.ವಿ ಮೊಕದ್ದಮೆಯನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News