ಭಟ್ಕಳ: ಸಿದ್ಧಾರ್ಥ ಪದವಿ ಮಹಾವಿದ್ಯಾಲಕ್ಕೆ ಶೇ.100 ಫಲಿತಾಂಶ
Update: 2017-08-03 18:49 IST
ಭಟ್ಕಳ, ಆ.3: ತಾಲೂಕಿನ ಶಿರಾಲಿಯಲ್ಲಿರುವ ಸಿದ್ಧಾರ್ಧ ಪದವಿ ಮಹಾವಿದ್ಯಾಲಯ ಇದರ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಕಾಂ. ದ್ವಿತೀಯ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ಶೇ100% ಫಲಿತಾಂಶ ದಾಖಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಾಲೇಜಿನ ಮೂರು ವಿದ್ಯಾಥಿಗಳಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಸದರಿ ಪರೀಕ್ಷೆಯಲ್ಲಿ ಕು.ದಿವ್ಯಾ ಬಿ.ನಾಯ್ಕ 86%, ಕು.ಜಾನಕಿಎಮ್.ನಾಯ್ಕ 80%,ಕು.ಸುಶ್ಮಿತಾ ಎಮ್.ನಾಯ್ಕ 80% ಪಡೆದಿರುತ್ತಾರೆ.
ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.