ಉಪ್ಪಾರ ಜನಾಂಗವನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿಸಲು ಒತ್ತಾಯಿಸಿ ಧರಣಿ
ಚಾಮರಾಜನಗರ, ಆ.3: ಉಪ್ಪಾರ ಜನಾಂಗವನ್ನು ಎಸ್.ಟಿ ಎಂದು ಪರಿಗಣಿಸ ಬೇಕೆಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ತಾಲ್ಲೂಕಿನ ಉಪ್ಪಾರ ಜನಾಗದ ಮುಖಂಡರುಗಳು ಧರಣಿ ನಡೆಸಿದರು.
ಕರ್ನಾಟಕ ರಾಜ್ಯದಲ್ಲು ಸುಮಾರು 40 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಜನಾಂಗವು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದ ಸಮಾಜವಾಗಿದೆ. ಪ್ರ ವರ್ಗ-1ರಲ್ಲಿ ಬರುವ ಈ ಸಮಾಜಕ್ಕೆ ತನ್ನದೆ ಅದ ಇತಿಹಾಸ, ಪೌರಣಿಕ ಶಾಸನಗಳ ಹಿನ್ನೆಲೆ ಇದ್ದು, ಈ ಜನಾಂಗದ ಆದರ್ಶ ಪುಣ್ಯ ಪುರುಷ ಶ್ರೀಭಗೀರಥ ಮಹರ್ಷಿಗಳಾಗಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 69 ವರ್ಷ ಕಳೆದರೂ ಸಂವಿಧಾನದ ಆಶಯದಂತೆ ನಮ್ಮ ಜಾನಂಗಕ್ಕೆ ಸಾಮಾಜಿಕ ನ್ಯಾಯ ಎಂಬುದು ಒಂದು ಮರೀಚಿಕೆಯಾಗಿ ಉಳಿದಿದೆ.
ತಾವು ಹಿಂದುಳಿದ ವರ್ಗದ ನೇತಾರರು ಸಮಾನತೆಯ ಹರಿಕಾರರು ಹಿಂದುಳಿದ ಜನಾಂಗದ ಪರ ಅಪಾರ ಕಳಜಿ ಉಳ್ಳವರು ನುಡಿದಂತೆ ನಡೆಯುವ ಮಾನ್ಯ ಮುಖ್ಯ ಮಂತ್ರಿಗಳು ನಮ್ಮ ಸಮಾಜದ ಅನೇಕ ಪ್ರಮುಖ ಬೇಡಿಕೆ ಹಕ್ಕೊತ್ತಾಯಗಳನ್ನು ಅನೇಕ ಬಾರಿ ರಾಜ್ಯ ಸಮಸ್ತ ಉಪ್ಪಾರ ಬಂದುಗಳು ತಮ್ಮಲ್ಲಿ ವಿನಂತಿಸುತ್ತಾ ಬಂದಿದ್ದಾರೆ. ಸಮಾಜವು ತೀರ ನಿಕೃಷ್ಟ ಬದುಕು ಸಾಗಿಸುತ್ತಿದ್ದು, ಶೋಷಿತ ಸಮಾಜಗಳಲ್ಲಿ ತೀರ ಹಿಂದುಳಿದ ಜನಾಂಗವಾಗಿರುವ ಕಾರಣ ಈ ಜನಾಂಗವನ್ನು ಎಸ್.ಟಿ ಗೆ ಸೇರಿಸಿ ಎಂಬುದಾಗಿ ಮನವಿ ಮಾಡಿದರು. ಅಲ್ಲದೇ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಣಾಯಕರಾಗಿ ನಮಗೆ ಚಾಮರಾಜನಗರದ ಜಿಲ್ಲಾಡಳಿತ ವತಿಯಿಂದ ನಿರ್ಮಿಸಿರುವ ಕಲಾಭವನಕ್ಕೆ ಶ್ರೀ. ಭಗೀರಥ ಭವನ ಎಂದು ನಾಮಕರಣ ಮಾಡಬೇಕೆಂದು ತಾಲ್ಲೂಕು ಸಮಸ್ತ ಉಪ್ಪಾರ ಜನಾಂಗದವರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಚಾಮರಾಜನಗರ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಿಂಗರಾಜು ಮನವಿಮಾಡಿದ್ದಾರೆ.
ಧರಣಿಯಲ್ಲಿ ಜನಾಗದ ಮುಖಂಡರಾದ ಸಂಘದ ಕಾರ್ಯದರ್ಶಿ ಎನ್ ಮಹದೇವಸ್ವಾಮಿ, ಉಪಾದ್ಯಕ್ಷ ಕೆ.ನೀಲಶೇಖರ, ಖಜಾಂಚಿ ಆರ್.ಮಹದೇವಶೆಟ್ಟಿ, ಜಿ.ಎಂ.ಗಾಡ್ಕರ್, ಶಿವಕುಮಾರ್, ಕೃಷ್ಣಶೆಟ್ಟಿ, ನಗರಸಭಾ ಸದಸ್ಯ ಬಂಗಾರು, ಶ್ರೀನಿವಾಸ ಉಪ್ಪಾರ್, ನಾಗಶೆಟ್ಟಿ 5 ಗಡಿ ಯಜಮಾನರು ಕಟ್ಟೆ ಮನೆ ಯಜಮಾನರು ಚುನಾಯಿತ ಜನಪ್ರತಿನಿಧಿಗಳು ಕುಲಸ್ಥರು ಹಾಜರಿದ್ದರು.