×
Ad

ಸರಕಾರ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸಿದೆ: ಎಸ್.ಆರ್.ಪಾಟೀಲ್

Update: 2017-08-03 20:32 IST

ಮುಂಡಗೋಡ(ಶಿರಸಿ-ಬನವಾಸಿ), ಆ.3: ಕಾಂಗ್ರೆಸ್ ನ ಹಲವಾರು ನಾಯಕರು ದೇಶಕ್ಕಾಗಿ ಪ್ರಾಣವನ್ನೆ ತ್ಯಾಗಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾಂಗ್ರೆಸ್ ಸಹಾಯ ಮಾಡಿದೆ. ಭಾರತ ಇಂದು ಶಕ್ತಿಯುತ ದೇಶವಾಗಲು ಕಾಂಗ್ರೆಸ್ ಕಾರಣ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಎಸ್.ಆರ್ ಪಾಟೀಲ್ ಹೇಳಿದರು.

ಅವರು ಬನವಾಸಿ ಜಯಂತಿ ಪ್ರೌಢಶಾಲೆ ಆವರಣದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಯಲ್ಲಾಪುರ ಕ್ಷೇತ್ರದ ಬನವಾಸಿ ಹೊಬಳಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಅಭ್ಯಾಸವರ್ಗದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಏನು ಮಾಡಿಲ್ಲಾ ಎಂದು ಹೇಳುವ ಬಿಜೆಪಿ ಸ್ವಾತಂತ್ರ್ಯ ಪೂರ್ವ ಹಾಗು ನಂತರದ ದಿನಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಬಿಜೆಪಿ ಇತಿಹಾಸ ಪುಟವನ್ನು ತಿರುವಿನೋಡಲಿ. ಸಿದ್ದರಾಮಯ್ಯ ಸರಕಾರ ಚುನಾವಣೆಯಲ್ಲಿ ಘೋಷಿಸಿದ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದರೆ ನೂರು ದಿನಗಳಲ್ಲಿ ಕಪ್ಪುಹಣ ವಾಪಸ್ಸ್ ತರುತ್ತೇವೆ ಎಂದು ಹೇಳಿದ್ದರೂ, ಸಾವಿರ ದಿನಗಳಾದರೂ ಸಹಿತ ಇನ್ನೂ ತನಕ ಕಪ್ಪಹಣ ವಾಪಸ್ಸ್ ತರಲು ಸಾಧ್ಯವಾಗಲಿಲ್ಲ ಎಂದ ಮೇಲೆ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಜನರಿಗೆ ಮನವರಿಕೆ ಯಾಗಿದೆ. ದಲಿತರ ಮನೆಯಲ್ಲಿ ಊಟಮಾಡಿದರೆ ಸಾಲದು, ನಿಜವಾಗಿ ದಲಿತರ ಮೇಲೆ ಅಭಿಮಾನ ಇದ್ದರೆ ಬಿಜೆಪಿ ಅವರ ಶ್ರೇಯೋಭಿವೃದ್ದಿಗೆ ಶ್ರಮಿಸಲಿ. ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಮುಂದಿದೆ. ದಲಿತರ ಕಲ್ಯಾಣಭಿವೃದ್ದಿಗೆ ಸಿದ್ದರಾಮಯ್ಯ ಸರಕಾರ 85 ಸಾವಿರ ಕೋಟಿ ಮೀಸಿಲಿಟ್ಟಿದೆ. ಆದರೆ ಬಿಜೆಪಿ ಸರಕಾರ ಇದ್ದಾಗ ಕೇವಲ 21 ಸಾವಿರ ಕೋಟಿ ನೀಡಿದ್ದರು. ದಲಿತರ ಅಭಿವೃದಿ ಕಳಕಳಿ ಇರಬೇಕು ಎಂದರು.

ಯಲ್ಲಾಪುರ ಕ್ಷೇತ್ರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಪಕ್ಷದ ನಿಷ್ಠಾವಂತ. ಒಳ್ಳೆ ಜನರಪರ ಕಾರ್ಯಗಳನ್ನು ಮಾಡಿದ್ದಾರೆ. ಅವರ ಗೆಲುವಿಗೆ ತಾವು ಶ್ರಮಿಸುವುದಾಗಿ ಹೇಳಿದ ಅವರು, ಈ ಬಾರಿಯ ಚುನಾವಣೆಯಲ್ಲಿ 50 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಆರಿಸಿ ಬರಲಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ, ನಿವೇದಿತಾ ಅಳ್ವ, ಶಾಂತಾರಾಮ ಹೆಗಡೆ, ಮಂಗಳಾ ನಾಯ್ಕ ಬಸವರಾಜ ದೊಡ್ಮನಿ,ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್.ನಾಯಕ, ಮಾಜಿ ಶಾಸಕ ಆರ್.ಡಿ.ಪಾಟೀಲ ಮುಂಡಗೋಡ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ಯಲ್ಲಾಪುರ ಬ್ಲಾಕ್ ಅಧ್ಯಕ್ಷ ಡಿ.ಎನ್.ಗಾಂವಕರ, ವಿ.ಎಸ್.ನಾಯಕ್, ಶಾಸಕರ ಪುತ್ರ ವಿವೇಕ ಹೆಬ್ಬಾರ, ಮುಂಡಗೋಡ ಅಲ್ಪಸಂಖ್ಯಾತರ ಅಧ್ಯಕ್ಷ ಮಹ್ಮದಗೌಸ ಮಕಾನದಾರ ಸೇರಿದಂತೆ ಮುಂಡಗೋಡ, ಯಲ್ಲಾಪುರ ಬನವಾಸಿಯ ಧುರಿಣರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News