ದಾಂಡೇಲಿ: ಜಾತಿ ನಿಂದನೆ ಪ್ರಕರಣ ದಾಖಲು
Update: 2017-08-03 20:35 IST
ಮುಂಡಗೋಡ(ದಾಂಡೇಲಿ), ಆ.3: ಜಾತಿ ನಿಂದನೆ ಮಾಡಿದ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳೆದಾಂಡೇಲಿ ನಿವಾಸಿಗಳಾದ ಸಂಗೀತಾ ಬಡಿಗೇರ, ಸಂತೋಷ ನಾಯ್ಕ, ಪ್ರಭಾ ನಾಯ್ಕ, ಸರೋಜಾ ನಾಯ್ಕ, ಸತ್ಯವತಿ ನಾಯ್ಕ ಹಾಗೂ ಸಂದೀಪ ನಾಯ್ಕ ಆರು ಜನರು ಸೇರಿ ಸೋಮವಾರ ಸಂಜೆ ರಾಮಕ್ಕ ಕಾಂಬಳೆ ಮನೆ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿದ್ದಾರೆ. ಅಲ್ಲದೇ ನಿನಗೆ ಮತ್ತು ನಿನ್ನ ಮಗನಿಗೆ ಜೀವಂತವಾಗಿ ಬದುಕಲು ಬೀಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿದ್ದಾರೆ ಎಂದು ರಾಮಕ್ಕ ಕಾಂಬಳೆ ಬುಧವಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.