ಡಿಕೆಶಿ ಆಪ್ತನ ಮನೆಯಲ್ಲಿ ರಾತ್ರಿಯಿಂದಲೇ ಶೋಧ

Update: 2017-08-03 15:50 GMT

ಹಾಸನ, ಆ.3:  ಐಟಿ ಅಧಿಕಾರಿಗಳ ದಾಳಿಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಆಪ್ತನ ಮನೆಯಲ್ಲಿ ಶೋಧ ಕಾರ್ಯ ರಾತ್ರಿಯಿಂದಲೇ ನಗರದಲ್ಲಿ ಪ್ರಾರಂಭವಾಗಿದೆ.

 ಕಳೆದ ಒಂದು ದಿನಗಳ ಹಿಂದೆ ಏಕಾಏಕಿ ದೆಹಲಿ, ಬೆಂಗಳೂರು, ಕನಕಪುರ, ಕೆಂಗೇರಿ, ರಾಮನಗರ, ಮೈಸೂರು, ಯಲಹಂಕ ಸೇರಿದಂತೆ ಒಟ್ಟು 39 ಸ್ಥಳಗಳಲ್ಲಿ ದಾಳಿ ನಡೆಸಿರುವ 200ಕ್ಕೂ ಅಧಿಕ ಆಧಾಯ ಅಧಿಕಾರಿಗಳ ತಂಡವು ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಧವನಂ ಜ್ಯವೆಲರ್ಸ್‌, ಶೋಭಾ ಬಿಲ್ಡರ್ಸ್ ಸೇರಿದಂತೆ ವಿವಿದೆಡೆ ದಾಳಿ ಮಾಡಿ, ಅಕ್ರಮ ಆಸ್ತಿ, ನಗದು, ಚಿನ್ನಾಭರಣ, ಹಣ ಹೂಡಿಕೆ ಮಹತ್ವದ ದಾಖಲೆ ಇತರೆಯನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.

ಇದರ ಬೆನ್ನಲ್ಲೆ ನಗರದ ಬಿ.ಎಂ. ರಸ್ತೆಯಲ್ಲಿರುವ ಮಾಜಿ ಸಚಿವ ಬಿ. ಶಿವರಾಂ ಅಳಿಯ ಸಚಿನ್ ಮತ್ತು ಸೋದರ ಚೇತನ್ ನಾರಾಯಣ್ ನಿವಾಸಕ್ಕೆ ತೆರಳಿದ ಐಟಿ ಅಧಿಕಾರಿಗಳು ಬುಧವಾರ ರಾತ್ರಿಯಿಂದಲೇ ಪರಿಶೀಲನೆ ಮಾಡುತ್ತಿದ್ದಾರೆ. ಮೈಸೂರಿನಿಂದ ಆಗಮಿಸಿರುವ ಪೊಲೀಸರು ಕಾವಲು ಆಗಿದ್ದಾರೆ. ಇನೋವಾ ಆಗೂ ಇತರೆ ವಾಹನದಲ್ಲಿ ಬಂದ ಐಟಿ ಅಧಿಕಾರಿಗಳ ತಂಡ ಬುಧವಾರ ರಾತ್ರಿಯಿಂದ ಗುರುವಾರ ಸಂಜೆವರೆಗೂ ಆಸ್ತಿ ವಿವರವನ್ನು ಪರಿಶೀಲನೆ ನಡೆಸಿ ಮಹತ್ವದ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ. ಸಚಿನ್ ನಾರಾಯಣ್ ಅವರ ಮನೆ, ಹೋಟೆಲ್, ಪೆಟ್ರೋಲ್ ಬಂಕ್, ಮೇಲೆ ದಾಳಿ ನಡೆಸಲಾಯಿತು.

ಈ ವೇಳೆ ಸಾರ್ವಜನಿಕರು ಕೂಡ ಕುತುಹಲದಲ್ಲಿ ಹೊರಗಿನಿಂದಲೇ ವೀಕ್ಷಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News