×
Ad

ಸೊರಬ: ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್ ವಿತರಣೆ

Update: 2017-08-04 17:23 IST

ಸೊರಬ, ಆ.4: ದೇಶ ಕಾಯುವ ಯೋಧರಲ್ಲಿ ಬಹುಪಾಲು ಗ್ರಾಮೀಣ ಪ್ರದೇಶದಲ್ಲಿ ವ್ಯಾಸಾಂಗ ಮಾಡಿದವರಾಗಿದ್ದು, ಇಂತಹ ಯೋಧರು ಹಾಗೂ ಮೇಧಾವಿಗಳನ್ನು ರೂಪಿಸುವ ಸರ್ಕಾರಿ ಶಾಲೆಗಳು ಹಾಗೂ ಶಿಕ್ಷಕರನ್ನು ಸಮಾಜದ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು.

ತಾಲೂಕಿನ ಜಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಸಮಸ್ತ್ರ ಮತ್ತು 8ನೇ ವಿದ್ಯಾರ್ಥಿಗಳಿಗೆ ತರಗತಿಯ ಸೈಕಲ್ಗಳನ್ನು ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹೆಚ್ಚಾಗಿ ರೂಪಗೊಳ್ಳುತ್ತದೆ, ಇಲ್ಲಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳೂ ಕೂಡ ಉತ್ತಮ ನಾಯಕತ್ವ ಪಡೆದಿದ್ದಾರೆ. ಸರ್ಕಾರಿ ಶಾಲೆಗಳಿಗೆ ಒತ್ತು ನೀಡುವ ಜನಪ್ರತಿನಿದಿಗಳು ಹಾಗೂ ಸರ್ಕಾರಗಳು ಸದಾ ಜನರಮನದಲ್ಲಿ ಉಳಿಯುತ್ತಾರೆ, ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭೆಗಳಿದ್ದು ಅತ್ಯುತ್ತಮ ಅಂಕ ಪಡೆದಿದ್ದರೂ ಜನ ಸಂಪರ್ಕ ಸಾಧಿಸುವಲ್ಲಿ ಹಿಂದೇಟು ಹಾಕುತ್ತಾರೆ. ಇದರಿಂದ ಹೊರಬರಲು ಶಿಕ್ಷಕರು ಪೂರಕ ವ್ಯವಸ್ಥೆ ಕಲ್ಪಿಸಬೇಕು.

ಜಿಪಂ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಹಿಂದೆ ಶಾಲೆಗಳಿಗೆ ಮಳೆಯಲ್ಲೇ ನೆನೆದು ಬಹುದೂರ ನಡೆದು ಹೋಗಬೇಕಿತ್ತು. ಈಗ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡಿದ್ದು ಇದರೊಂದಿಗೆ ಪ್ರಸ್ತುತ ಇಂಗ್ಲೀಷ್ ಮಾಧ್ಯಮ ಕೂಡ ಒದಗಿಸಿರುವುದು ಶ್ಲಾಘನೀಯ. ತಾವು ಕೂಡ ಇದೇ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದು, ತಮ್ಮ ಆಡಳಿತ ಅವಧಿಯಲ್ಲಿ ಇಂಗ್ಲೀಷ್ ಮಾಧ್ಯಮ ದೊರೆತಿದ್ದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜು ವಹಿಸಿದ್ದರು. ವೇಧಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ವೃಷಬೇಂದ್ರ ಪರಶುರಾಮ್, ಬಿ.ಇ.ಓ ಕೆ.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಮಡ್ಲೂರ್, ಗ್ರಾ.ಪಂ ಅಧ್ಯಕ್ಷ ಮೋಹನ್ ಗೌಡ, ಸದಸ್ಯರಾದ ಶಿವಾನಿ ಹನುಮಂತಪ್ಪ, ಜ್ಯೋತಿ, ಪದ್ಮಾವತಿ, ಮಮತಾ, ಸಿ.ಆರ್.ಪಿ ಚಂದ್ರಶೇಖರ್, ಕುಮಾರ್, ಇ.ಸಿ.ಓ ಜಾಲಗಾರ್, ಪ್ರೆೀಮ್ ಕುಮಾರ್ ಮತ್ತಿತರರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News