ಗುಂಡ್ಲುಪೇಟೆ: ವರಮಹಾಲಕ್ಷ್ಮಿ: ವಿಶೇಷ ಪೂಜೆ
Update: 2017-08-04 19:47 IST
ಗುಂಡ್ಲುಪೇಟೆ, ಆ.4: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಅಮ್ಮನವರ ಮೂರ್ತಿಗೆ ವರಮಹಾಲಕ್ಷ್ಮಿ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ನಡೆಸಲಾಯಿತು.
ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸಿ ನೇತೃತ್ವದಲ್ಲಿ ಪೂಜೆಯನ್ನು ನಡೆಸಲಾಯಿತು. ಪಟ್ಟಣ ಹಾಗೂ ವಿವಿಧ ಗ್ರಾಮಗಳಿಂದ ಹೆಚ್ಚಿನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.