ಪುಷ್ಪಪ್ರದರ್ಶನಲ್ಲಿ ಕುವೆಂಪು ನೆನಪು..!

Update: 2017-08-04 18:33 GMT

 ಸ್ವಾತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆ.4ರಿಂದ 15ರವರೆಗೆ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ನಿವಾಸ, ಕವಿಶೈಲದ ಪ್ರತಿಕೃತಿಯನ್ನು ಪುಷ್ಪಗಳಿಂದ ನಿರ್ಮಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಕನ್ನಡಕ್ಕೆ ಜ್ಞಾನಪೀಠ ಪುರಸ್ಕಾರ ದೊರೆತ 50 ವರ್ಷದ ಸವಿ ನೆನಪಿಗಾಗಿ ಕುವೆಂಪು ಅವರ ಬದುಕು ಸಾಧನೆಗಳನ್ನು ಈ ಫಲಪುಷ್ಟ ಪ್ರದರ್ಶನದಲ್ಲಿ ಬಿಂಬಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor