ಮಾನಭಂಗ ಮಾಡಲೆತ್ನಿಸಿದ ವ್ಯಕ್ತಿಗೆ ಸಜೆ
Update: 2017-08-05 18:58 IST
ಚಾಮರಾಜನಗರ, ಆ. 5: ಬಾಲಕಿಯೊಬ್ಬಳ ಮಾನಭಂಗ ಮಾಡಲು ಯತ್ನಿಸಿದ ವ್ಯಕ್ತಿಗೆ ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ ಸಜೆ ಹಾಗೂ 500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಗ್ರಾಮದಲ್ಲಿ ಬಾಲಕಿಯು ಒಬ್ಬಳೇ ಇದ್ದಾಗ ತೆರಕಣಾಂಬಿ ಗ್ರಾಮದ ಅಬ್ದುಲ್ ರೆಹಮಾನ್ ಅಲಿಯಾಸ್ ಅಜ್ಮಲ್ ಅಲಿಯಾಸ್ ಅಜ್ಜು ನಿಮ್ಮ ಅಪ್ಪ ನಿಮ್ಮನ್ನು ತೋಟಕ್ಕೆ ಕರೆದುಕೊಂಡು ಬರಲು ಹೇಳಿದ್ದಾನೆ ಎಂದು ಸುಳ್ಳು ಹೇಳಿ ಸುಬ್ಬಪ್ಪ ಎಂಬುವರ ಜಮೀನಿನ ಬಳಿ ಮಾನಭಂಗ ಮಾಡಲು ಯತ್ನಿಸಿದ್ದ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆದು ಅಬ್ದುಲ್ ರೆಹಮಾನ್‍ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು 2 ವರ್ಷ ಸಜೆ ಹಾಗೂ 500 ರೂ. ದಂಡ ವಿಧಿಸಿ ಆಗಸ್ಟ್ 3ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.