ಕಸದರಾಶಿಗೆ ಬೆಂಕಿಹಚ್ಚಿದ ಕಿಡಿಗೇಡಿಗಳು
Update: 2017-08-05 20:30 IST
ಪಾಂಡವಪುರ, ಆ.5: ಕಿಡಿಗೇಡಿಗಳು ಕಸದರಾಶಿಗೆ ಬೆಂಕಿಹಚ್ಚಿದ ಪರಿಣಾಮ ಪಟ್ಟಣದ ಹನುಮಂತನಗರ, ಮಹಾತ್ಮಾಗಾಂಧೀಜಿ ಬಡಾವಣೆಯಲ್ಲಿ ದಟ್ಟ ಹೊಗೆ ಆವರಿಸಿ ಕೆಲಕಾಲ ನಾಗರಿಕರು ಆತಂಕಗೊಂಡಿದ್ದರು.
ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬಹುತೇಕ ಕಸ ಸುಟ್ಟುಹೋಗಿ ದಟ್ಟ ಹೊಗೆ ಆವರಿಸಿ ಜನ ಆತಂಕಕ್ಕೀಡಾಗಿದ್ದರು. ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಸುದ್ದಿಮುಟ್ಟಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿನಂದಿಸಿ ಆತಂಕ ನಿವಾರಿಸಿದರು.