ವಿವಾಹಿತೆ ಆತ್ಮಹತ್ಯೆ
Update: 2017-08-06 16:58 IST
ಎನ್.ಆರ್.ಪುರ, ಆ.6: ಜೀವನದಲ್ಲಿ ಜೀಗುಪ್ಸೆಗೊಂಡು ಮನನೊಂದು ವಿವಾಹಿತ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೈಲ್ ಬಿಲ್ಡಿಂಗ್‍ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆಯನ್ನು ಪಾರ್ವತಮ್ಮ ಎಂಬವರ ಪುತ್ರಿ ಸಂಗೀತ(25) ಎಂದು ಗುರುತಿಸಲಾಗಿದೆ. ಈಕೆಯನ್ನು ಕಳೆದ ಜೂ.11ರಂದು ಜೈಲ್ ಬಿಲ್ಡಿಂಗ್ ವಾಸಿ ನವೀನ ಎಂ¨ಬವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾಗಿ ಸ್ವಲಪ ದಿನಗಳಲ್ಲಿ ನವೀನನಿಗೆ ಟಿ.ಬಿ.ಖಾಯಿಲೆ ಇರುವುದು ಗೊತ್ತಾಗಿ ಮನನೊಂದಿದ್ದರು.
ಟಿ.ಬಿ.ಖಾಯಿಲೆಯಿಂದ ತೊಂದರೆಗೊಳಗಾಗಿದ್ದ ನವೀನ ಮದ್ಯಪಾನ ಮಾಡುತ್ತಿದ್ದ. ಇದನ್ನು ಕಂಡು ಬೇಸತ್ತು ಹೋದ ಸಂಗೀತ ಮನನೊಂದು ಮನೆಯ ಅಡುಗೆ ಮನೆಯಲ್ಲಿ ಕೋಟೆ ಸೂರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ತಾಯಿ ಎನ್.ಆರ್.ಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.