ಬುದ್ದಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ

Update: 2017-08-06 12:48 GMT

ಕಡೂರು, ಆ. 6:  ಸಿಂಗಟಗೆರೆ ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ತಮ್ಮ 42ನೇ ಹುಟ್ಟುಹಬ್ಬವನ್ನು ಪಟ್ಟಣದ ನಿವೇದಿತಾ ಬುದ್ದಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.

  ಯಳನಾಡು ಮಠದ ಶ್ರೀ ಸಿದ್ದರಾಮ ದೇಶೀಕೇಂದ್ರ ಸ್ವಾಮಿ,ಇತ್ತೀಚೆಗೆ ಸಿಂಗಪೂರ್‍ಗೆ ತೆರಳಿ ಏಷ್ಯಾ ಖಂಡ ವಿಭಾಗದ ಯೋಗಸಾನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಶಾಲಿನಿ ಮತ್ತು ಒಡೆಯರ್ ಅಭಿಮಾನಿಗಳು  ಬುದ್ದಿಮಾಂಧ್ಯ ಮಕ್ಕಳ ಶಾಲೆಯ ಆವರಣದಲ್ಲಿ ಸಸಿ ನೆಟ್ಟು. ಸಿಹಿ ಹಂಚಿದರು.

  ಈ ಸಂದರ್ಭ ನಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಯಳನಡು ಮಠÀದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮಿ ಮಾತನಾಡಿ, ಒಡೆಯರ್ ಅವರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಜನರ ಪ್ರೀತಿ-ವಿಶ್ವಾಸ ಗಳಿಸಬೇಕು ಸಲಹೆ ನೀಡಿದರು.

  ಸಾಹಿತಿ ಚಟ್ಟನಹಳ್ಳಿ ಮಹೇಶ್ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ. ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಚಿಂತಿಸಬೇಕು ಎಂದ ಅವರು ಒಡೆಯರ್ ಅವರು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

  ಸಿಂಗಪೂರ್‍ನಲ್ಲಿ ನಡೆದ ಯೋಗಸ್ಪರ್ಧೆಯಲ್ಲಿ ಏಷ್ಯಾಖಂಡಕ್ಕೆ ಪ್ರಥಮ ಸ್ಥಾನ ಪಡೆದ ಶಾಲಿನಿ ಮತ್ತು ಸಾಹಿತಿ ಚಟ್ಟನಹಳ್ಳಿ ಮಹೇಶ್ ಅವರಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು.

  ಈ ಸಂದರ್ಭ ಪುರಸಭಾ ಅಧ್ಯಕ್ಷ ಎಂ.ಮಾದಪ್ಪ, ಸದಸ್ಯರಾದ ಮಂಜುನಾಥ, ಸೋಮಶೇಖರ್, ಕೋಳಿಲೋಕೇಶ್, ಬಷೀರ್‍ಸಾಬ್, ತಾಲೂಕು ಕುರುವ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ್, ಹೆಚ್.ಸಿ.ರೇವಣಸಿದ್ದಪ್ಪ, ಎಸ್.ಟಿ.ತಮ್ಮಯ್ಯ, ಸುಜಾತ ಚಂದ್ರಶೇಖರ್, ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News