ಮರದ ಕೊಂಬೆ ಬಿದ್ದು ಕಾರ್ಮಿಕ ಮೃತ್ಯು
Update: 2017-08-06 19:55 IST
ಮಡಿಕೇರಿ, ಆ.6: ರಸ್ತೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಮರದ ಕೊಂಬೆಯೊಂದು ಮೈಮೇಲೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡಿನಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೂಡಿಹಳ್ಳಿ ಗ್ರಾಮದ ನಿರಂಜನ್ (23) ಮೃತರು ಎಂದು ಗುರುತಿಸಲಾಗಿದೆ. ಕೊಂಬೆ ಬಿದ್ದ ತಕ್ಷಣ ಗಾಯಗೊಂಡಿದ್ದ ನಿರಂಜನ್ ರನ್ನು ಇತರ ಕಾರ್ಮಿಕರು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಲ್ಲಿ ವೈದ್ಯರಿಲ್ಲದ ಕಾರಣ ಅಲ್ಲಿಂದ ಅಮ್ಮತಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ನಿರಂಜನ್ ಮೃತ ಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.