×
Ad

ಮನೆಗೆ ನುಗ್ಗಿ ನಗ-ನಗದು ಕಳವು: ದೂರು ದಾಖಲು

Update: 2017-08-06 20:26 IST

ನಾಗಮಂಗಲ, ಆ.6: ಪಟ್ಟಣದ ಪಾಲಗ್ರಹಾರ ರಸ್ತೆಯ ಪಕ್ಕದಲ್ಲಿನ ಮನೆಯ ಬಾಗಿಲು ಮುರಿದು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 25 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ನಡೆದಿದೆ.

ತಾಲೂಕಿನ ಕಂಬದಹಳ್ಳಿ ಮುರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಪ್ರಭಾಕರ್ ಎಂಬುವರ ಮನೆಯಲ್ಲಿ ಈ ಕಳ್ಳತನವಾಗಿದ್ದು, ಮನೆಗೆ ಬೀಗ ಹಾಕಿ ತಮ್ಮ ಊರಿಗೆ ತೆರಳಿದ್ದನ್ನು ಗಮನಿಸಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ರವಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಬೀರುವಿಗೆ ಲಾಕ್ ಹಾಕಿಲ್ಲವಾದ್ದರಿಂದ ಒಳಗಿದ್ದ 75 ಗ್ರಾಂ ಚಿನ್ನ-ಬೆಳ್ಳಿ ಆಭರಣ ಮತ್ತು 25 ಸಾವಿರ ರೂ. ನಗದು ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News