×
Ad

ಹಣೂರು: ಕಾಲೇಜಿನ ನೂತನಕಟ್ಟಡ ಉದ್ಘಾಟನೆ

Update: 2017-08-07 19:44 IST

ಹನೂರು, ಆ.7: ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಮೂಲಭೂತ ಕೂರತೆಗಳಿದ್ದರೂ ಸಹ ಶಿಕ್ಷಣದಲ್ಲಿ ಹಿಂದೆ ಸರಿಯದೆ ಜಿಲ್ಲೆಯಲ್ಲಿಯೇ ಬಂಡಳ್ಳಿ ಕಾಲೇಜು ಪ್ರತಿ ವರ್ಷ ಪ್ರಥಮ ಸ್ಥಾನವನ್ನು ಪಡೆದುಕೊಂಡು ಬಂದಿರುತ್ತದೆ. ಈ ಸಾಧನೆ ಹೀಗೆ ಮುಂದುವರೆಯಲಿ ಎಂದು ಶಾಸಕ ನರೇಂದ್ರ ರಾಜು ಗೌಡ ತಿಳಿಸಿದರು.

ಬಂಡಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಸಜ್ಜಿತವಾದ ನೂತನಕಟ್ಟಡ ಹಾಗೂ ಕ್ರೀಡೆ ಸಾಹಿತ್ಯ ಸಾಂಸ್ಕೃತಿಕ ಸಂಘಗಳು ಹಾಗೂ ಎನ್ ಎಸ್ ಎಸ್ ಚಟುವಟಿಕೆ ಉದ್ಗಾಟಿಸಿ ಮಾತನಡಿದ ಅವರು, ಗ್ರಾಮೀಣ ಭಾಗದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದು. ಹೆಣ್ಣು ಮಕ್ಕಳು ಇನ್ನು ಹೆಚ್ಚು ಮುಂದೆ ಬರಬೇಕು ಎಂಬ ಸದುದ್ದೇಶದಿಂದ ನಮ್ಮ ಸರ್ಕಾರ ಕಾಲೇಜುಗಳನ್ನು ತೆರೆಯುತ್ತಿದೆ. ಹಾಗೂ ಬಂಡಳ್ಳಿ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ 170 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದು, ವಿಜ್ಙಾನ ವಿಭಾಗದಲ್ಲಿ 29, ಕಲಾ ವಿಭಾಗದಲ್ಲಿ 140 ಮಕ್ಕಳು ವ್ಯಾಸಂಗಮಾಡುತ್ತಿದ್ದಾರೆ ಎಂದರು.

ಅದರಲ್ಲೂ 119 ಹೆಣ್ಣು ಮಕ್ಕಳು ವ್ಯಾಸಂಗ ಮಡುತ್ತಿರುವುದು. ಅದ್ದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚಾಗಿ ಬರುತ್ತಿರುವುದು ಬಹಳ ಮುಖ್ಯವಾದ ಸಂಗತಿಯಾಗಿದೆ .ಹಿಂದಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಯಾರೋಬ್ಬ ಪೋಷಕರು ಮುಂದೆ ಬರುತ್ತಿರಲಿಲ್ಲ .ಈಗ ಬಹಳಷ್ಟು ಸುದಾರಣೆಗಳಾಗಿದ್ದು. ಪ್ರಪಂಚದಲ್ಲಿ ಹೆಣ್ಣು ಮಕ್ಕಳು ವಿಜ್ಙಾನ, ವಾಣಿಜ್ಯ, ಕ್ರೀಡೆ ,ರಾಜಕೀಯ ಕ್ಷೇತ್ರ ಇನ್ನು ಹಲವು ಕ್ಷೇತ್ರಗಳಲ್ಲಿ ಉತ್ತಮವಾದ ಸಾಧನೆ ಮಡುತ್ತಿದ್ದು, ಇದ್ದನ್ನು ಪೋಷಕರು ಮನಗಂಡು ಗಂಡು ಮಕ್ಕಳಿಗೆ ಯಾವ ರೀತಿ ವಿದ್ಯಾಬ್ಯಾಸವನ್ನು ನೀಡುತ್ತೀರಾ ಅದೇ ರೀತಿ ಹೆಣ್ಣು ಮಕ್ಕಳಿಗೂ ಸಹ ಉತ್ತಮವಾದ ವಿದ್ಯಾಬ್ಯಾಸವನ್ನು ಕೊಡಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು.

ವಿದ್ಯಾರ್ಥಿಗಳು ವಿದ್ಯಾಬ್ಯಾಸದ ಜೊತೆಗೆ ತಮ್ಮ ಆಸಕ್ತಿಗೆ ಇಚ್ಚಾನುಸಾರವಾದ ಕ್ರೀಡೆ ಸಾಹಿತ್ಯ ಹಾಡುಗಾರಿಕೆ, ಮತ್ತು ಎನ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆಗಳನ್ನು ಹೊರ ತರುವ ಪ್ರಯತ್ನವನ್ನು ವಿದ್ಯಾರ್ಥಿದಿಸೆಯಿಂದಲೇ ಬೆಳಸಿಕೊಳ್ಳಬೇಕು. ಅದೇ ರೀತಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಾವದ್ ಅಹಮದ್ ಮಾತನಾಡಿ, ಈ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಶಿಥಲಾ ವ್ಯವಸ್ಥೆಯಲ್ಲಿಯೇ ಹಾಗೂ ಕಾಲೇಜಿಗೆ ಸೂಕ್ತವಾದ ಕಟ್ಟಡವಿಲ್ಲದೆ ವೀರಶೈವ ಭವನ ಇನ್ನಿತರ ಇಲಾಖೆಗಳ ಕೂಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡುಯುತ್ತಿದ್ದ ಸಂದರ್ಭದಲಿ ಇಲ್ಲಿನ ಸಮಸ್ಯಯ ಬಗ್ಗೆ ಗ್ರಾಮಸ್ಥರು ಶಾಸಕ ಆರ್ ನರೇಂದ್ರ ರಾಜೂಗೌಡರ ಬಳಿ ಹೇಳಿಕೊಂಡರು. ಆ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ//ಎಚ್ ಎಸ್ ಮಹದೇವ ಪ್ರಸಾದ್‌ರವರು ಮತ್ತು ನಮ್ಮ ಶಾಸಕರು ಶಿಕ್ಷಣ ಸಚಿವರಾಗಿದ್ದ ಕಿಮ್ಮನೆರತ್ನಾಕರ್ ಸೇರಿ ಇಲ್ಲಿನ ಸಮಸ್ಯಯ ಬಗ್ಗೆ ಸದನದಲ್ಲಿ ದ್ವನಿ ಎತ್ತಿ ನಮ್ಮ ಕಾಲೇಜಿಗೆ ಕಟ್ಟಡ ನಿರ್ಮಾಣಕ್ಕೆ ನಭಾರ್ಡ ಸಹಯೋಗದಲ್ಲಿ ಆರ್‌ಡಿಎಪ್ 19ರ ಯೋಜನೆ ಅಡಿ ಮಾದಲ ಹಂತದಲ್ಲಿ 80 ಲಕ್ಷ ರೂ. ಎರಡನೇ ಹಂತದಲ್ಲಿ 50 ಲಕ್ಷರೂ. ಮಂಜೂರು ಮಾಡಿಸಿ ಕೊಟ್ಟರು.

ಬಳಿಕ ಗ್ರಾಮದ ಮುಜಾದಾಜೀ ಬೇಗಂರವರ ಕುಟಂಬದವರು 1ಎಕರೆ ಭೂಮಿಯನ್ನು ಧಾನವಾಗಿ ನೀಡಿದ್ದಾರೆ. ಇವರೆಲ್ಲರಾ ಸಹಕಾರದ ನಡುವೆ ನೂತನವಾದ ಭವ್ಯ ಕಾಲೇಜು ಕಟ್ಟಡ ನಿರ್ಮಾಣವಾಗಿದೆ. ಇದ್ದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಡಿಕೂಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ರಾಜಪ್ಪ ಸದಸ್ಯರಾದ ಶಾಹುಲ್ ಅಹಮದ್, ಚಕ್ಕಮಣಿಸಿದ್ದ ದೂಡ್ಡಕುನ್ನನಯಕ ಶಿವಮೂರ್ತಿ, ಪದವಿಪೂರ್ವ ಕಾಲೇಜಿನ ಉಪನಿರ್ದೇಶಕರಾದ ರೆಜಿನಿ ಪಿ ಮಲಾಕಿ ಜೆ ಎಸ್ ಎಸ್ ಕಾಲೇಜಿನ ಪ್ರಾಶಂಪಾಲರಾದ ಮಹದೇವ ಪ್ರಸಾದ್, ಕಾಲೇಜಿನ ಪ್ರಾಶಂಪಾಲರಾದ ಛಾಯವತ್ತಮ್ಮ, ಸಹಾಯಕ ಕಾರ್ಯಪಾಲಕ ಅಬಿಯಂತರರಾದ ಮಹದೇವಪ್ರಸಾದ್ ಇನ್ನಿತರರು ಹಾಜರಿದ್ದರು .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News