×
Ad

ಸಗಣಿ ಸುರಿದುಕೊಂಡು ಪ್ರತಿಭಟನೆ

Update: 2017-08-07 22:37 IST

ಮಂಡ್ಯ, ಆ.7: ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಗಣಿ ಎರಚಿಕೊಂಡು ಪ್ರತಿಭಟನೆ ನಡೆಸಿದರು.

ಮೈಮೇಲಿ ಸಗಣಿ ಸುರಿದುಕೊಂಡು ಪ್ರತಿಭಟನೆ ನಡೆಡಿಸಿದ ಶಿವಕುಮಾರ್ ಆರಾಧ್ಯ ಹಾಗು ಎಚ್.ರಾಜು, ಜನಜಾನುವಾರುಗಳ ರಕ್ಷಣೆಗಾಗಿ ಕೂಡಲೇ ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರಕಾರಕ್ಕೆ ಜಿಲ್ಲೆಯ ರೈತರಿಗಿಂತ ತಮಿಳುನಾಡಿನ ರೈತರ ಮೇಲೆಯೇ ಹೆಚ್ಚು ಒಲವು. ಆದ್ದರಿಂದಲೇ ಪ್ರತಿನಿತ್ಯ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನರನ್ನು ಕಡೆಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಿ.ಟಿ.ಮಂಜುನಾಥ್, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News