ಚೆಸ್ ಪಂದ್ಯ: ಯದ್ವಿತಿಗೆ ದ್ವಿತೀಯ ಸ್ಥಾನ
Update: 2017-08-07 22:40 IST
ಮಂಡ್ಯ, ಆ.7: ಚೆಸ್ ಮೈನ್ ಸಂಸ್ಥೆ ವತಿಯಿಂದ ಬೆಂಗಳೂರಿನ ಮಾಗಡಿ ರಸ್ತೆಯ ಎಸ್.ಜಿ.ಕನ್ವೆನ್ಷನ್ ಹಾಲ್‌ನಲ್ಲಿ ಆ.5 ಮತ್ತು 6 ರಂದು ನಡೆದ ಅಖಿಲ ಭಾರತ ವೇಗದ ಚೆಸ್ ಪಂದ್ಯಾವಳಿಯ ಏಳು ವರ್ಷದೊಳಗಿನವರ ವಿಭಾಗದಲ್ಲಿ ಮಂಡ್ಯ ಚೆಸ್ ಅಕಾಡೆಮಿಯ ಎಂ.ಎಚ್.ಯದ್ವಿತಿ ದ್ವಿತೀಯ ಸ್ಥಾನ ಪಡೆದು ಸೆಪ್ಟೆಂಬರ್‌ನಲ್ಲಿ ವಿಜಯವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಪಂದ್ಯಾವಳಿಗೆ ರಾಜ್ಯ ತಂಡ ಪ್ರತಿನಿಧಿಸಲಿದ್ದಾಳೆಂದು ಅಕಾಡೆಮಿ ಕಾರ್ಯದರ್ಶಿ ಮಂಜುನಾಥ್ ಜೈನ್ ತಿಳಿಸಿದ್ದಾರೆ.