ಕಾವೇರಿ ಡ್ರೈವರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಬಿ.ಜಿ.ಆನಂದ ಆಯ್ಕೆ
Update: 2017-08-07 22:53 IST
ಮಡಿಕೇರಿ, ಆ.7: ನಗರದ ಕಾವೇರಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಜಿ.ಆನಂದ, ಉಪಾಧ್ಯಕ್ಷರಾಗಿ ಎಂ.ಕೆ.ನಂದ ಹಾಗೂ ಕಾರ್ಯದರ್ಶಿಯಾಗಿ ಸುಂದರ ಬಂಗೇರ ಆಯ್ಕೆಯಾಗಿದ್ದಾರೆ.
ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.
ಖಜಾಂಚಿಯಾಗಿ ಬಿ.ಬಿ.ದಿನೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಚಂದ್ರಶೇಖರ್, ಗೌರವ ಅಧ್ಯಕ್ಷರಾಗಿ ಕೆ.ಆರ್.ಹರೀಶ್, ಸಲಹೆಗಾರರಾಗಿ ಕೆ.ಆರ್.ನಾಗೇಶ್ ಮತ್ತು ಬಿ.ಕೆ.ಜಗದೀಶ್, ಸದಸ್ಯರುಗಳಾಗಿ ವಿ.ಬಿ.ರಮೇಶ್, ಜಾಕೀರ್, ರಫೀಕ್ ಮದೆನಾಡು, ಪಿ.ಪಿ.ಕುಮಾರ್, ಕೆ.ಕೆ.ಮಂಜುನಾಥ್ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಎ.ಸಿ.ಲೋಕೇಶ್ಕಾರ್ಯ ನಿರ್ವಹಿಸಿದರು. ನಗರದ ಹೊಟೇಲ್ ಚಾಯ್ಸ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಬಿ.ಕೆ.ಜಗದಿಶ್ ವಹಿಸಿದ್ದರು.