ದಸರಾ ದರ್ಬಾರ್‌ಗೆ ಆ.16 ರಂದು ಭೂಮಿ ಪೂಜೆ

Update: 2017-08-09 12:02 GMT

ಕಡೂರು,ಆ. 9:  ದಸರಾ ದರ್ಬಾರ್ ದಸರಾ ಮಹೋತ್ಸವಕ್ಕೆ ಆ.16 ರಂದು ಮಹಾಮಂಟಪದ ನಿರ್ಮಾಣಕ್ಕಾಗಿಭೂಮಿ ಪೂಜೆ ನಡೆಯಲಿದೆ ಎಂದು ರಂಭಾಪುರಿ ಖಾಸಾ ಶಾಖಾ ಮಠದಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿ ಹೇಳಿದರು.

 ಅವರು ಬುಧವಾರ ಪಟ್ಟಣದ ದಸರಾ ದರ್ಬಾರ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಈ ಭೂಮಿ ಪೂಜೆಯನ್ನು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳಾದ ಶ್ರೀ ವೀರಸಿಂಹಾಸನಾಧೀಶ್ವರ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಲಿದ್ದಾರೆ. ಬಾಳೆಹೊನ್ನೂರು ರಂಭಾಪುರಿ ಶ್ರೀಗಳ 26ನೇ ವರ್ಷದ ದಸರಾ ಶರನ್ನವರಾತ್ರಿ ಮಹೋತ್ಸವ ಈ ಬಾರಿ ಬಯಲು ಸೀಮೆಯ ಭಗವಾದ ಕಡೂರು ಪಟ್ಟಣದಲ್ಲಿ ಸೆ.21 ರಿಂದ 30ರ ವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ ಎಂದು ಹೇಳಿದರು.

ಮಾನವ ಧರ್ಮವನ್ನೇ ಮೂಲ ಮಂತ್ರವನ್ನಾಗಿಸಿ ಕೊಂಡಿರುವ ಹಾಗೂ ಶ್ರೀ ಪೀಠದ ಮೂಲಸ್ಥಾನ ಆಗಿರುವ ಚಿಕ್ಕಮಗಳುರು ಜಿಲ್ಲೆ ಕಡೂರು ನಗರದಲ್ಲಿ 26ನೇ ವರ್ಷದ ದಸರಾ ಜನಜಾಗೃತಿ ಮತ್ತು ಸರ್ವ ಧರ್ಮ ಸಮ್ಮೇಳನವು ನಡೆಯುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ ಸುಗಂಧ ಸೂಸುವುದಲ್ಲದೆ ಭಾವ್ಯಕ್ಯತೆ ಬೆಳೆಸುವ ಐತಿಹಾಸಿಕ ಸಾಮಾಜಿಕ, ಆಧ್ಯಾತ್ಮಿಕ ಹಬ್ಬವಾಗಲಿದೆ ಎಂದರು.

ತಾಲೂಕಿನಲ್ಲಿ ಬರ ತೋಲಗಲಿ ಹಸಿರು ಕಾಂತ್ರಿ ಮೂಳಗಲಿ ಎಂದು ಶ್ರೀಗಳು ನಿತ್ಯಇಷ್ಟಲಿಂಗ ಪೂಜೆ ನೆರವೇರಿಸಲಿದ್ದಾರೆ. ಈ ಮಹೋತ್ಸವದಲ್ಲಿ ಜಾತಿ, ಮತ, ಪಂಥ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯುವ ಸಂಕಲ್ಪ ಮಾಡಬೇಕು. ಕಳೆದ 17 ವರ್ಷಗಳ ಹಿಂದೆ ಬೀರೂರು ಪಟ್ಟಣದಲ್ಲಿ ಶ್ರೀಗಳ ದಸರಾ ದರ್ಬಾರ್ ಮಹೋತ್ಸವ ನಡೆದಿದ್ದು, ನಂತರದ ದಿನಗಳಲ್ಲಿ ಈ ಬಾರಿ ಕಡೂರು ಪಟ್ಟಣದಲ್ಲಿ ಸೆ.21 ರಿಂದ 30ರವರೆಗೆ ಜರುಗಲಿದೆ ಎಂದು ತಿಳಿಸಿದರು.

ಈ ಸಂದರ್ಭ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಬಿ.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಲೋಕೇಶ್, ಕಾರ್ಯಾಧ್ಯಕ್ಷರಾದ ಬೆಳ್ಳಿಪ್ರಕಾಶ್, ಕೆ.ಎಂ. ಕೆಂಪರಾಜು, ಎಪಿಎಂಸಿ ಅಧ್ಯಕ್ಷ ಓಂಕಾರಪ್ಪ ಹೆಚ್.ವಿ. ಗಿರೀಶ್, ತುರುವನಹಳ್ಳಿರೇಣುಕಯ್ಯ, ಸಾಶಿವಪ್ಪ, ತಾರಾನಾಥ್, ರವಿಪ್ರಕಾಶ್ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News