×
Ad

ಡೆಂಗ್ ರೋಗದಿಂದ ಬಳಲುತ್ತಿದ್ದ ವರ್ತಕ ಮೃತ್ಯು

Update: 2017-08-09 18:20 IST

ಮಡಿಕೇರಿ ಆ. 9 : ಡೆಂಗ್ ರೋಗದಿಂದ ಬಳಲುತ್ತಿದ್ದ ಮಡಿಕೇರಿಯ ವ್ಯಾಪಾರಿಯೊಬ್ಬರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಗರದ ಹಿಲ್‌ರಸ್ತೆ ನಿವಾಸಿ ಹಬೀಬ್ ಬಾಬಾ ಎಂಬುವವರೆ ಸಾವಿಗೀಡಾದ ದುರ್ದೈವಿ. ವಾರದ ಹಿಂದೆ ತಮಿಳುನಾಡಿಗೆ ತೆರಳಿದ್ದ ಅವರು ಹಿಂತಿರುಗುವಾಗ ಜ್ವರಕ್ಕೆ ತುತ್ತಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಡೆಂಗ್ ಇರುವ ಬಗ್ಗೆ ಖಾತ್ರಿ ಪಡಿಸಿದ್ದರು. ನಂತರಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದು ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಹಬೀಬ್ ಬಾಬಾ ಮೃತಪಟ್ಟರು.

ಮೃತರ ಅಂತ್ಯಕ್ರಿಯೆ ಆ.9 ರಂದುನಗರದ ಈದ್ಗಾ ಮೈದಾನದಲ್ಲಿ ನಡೆಯಿತು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಬೀಬ್ ಬಾಬಾ ನಗರ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ನಗರ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ರಜಾಕ್ ಬಾಬಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕೊಡಗಿನಲ್ಲಿ 155 ಡೆಂಗ್ ಪ್ರಕರಣ

ಪ್ರಸಕ್ತ ಸಾಲಿನ ಜನವರಿ 1 ರಿಂದ ಜುಲೈ 31 ರವರೆಗೆ 619 ಶಂಕಿತ ಡೆಂಗ್ ಪ್ರಕರಣಗಳಲ್ಲಿ 155 ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಢಪಟ್ಟಿದೆ. ಇವುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖಾ ಪ್ರಬಾರ ಅಧಿಕಾರಿ ಡಾ. ಎಂ.ಶಿವಕುಮಾರ್ ತಿಳಿಸಿದ್ದಾರೆ.
ವರ್ಷದ ಆರಂಭದಿಂದ ಜುಲೈ ಅಂತ್ಯದವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ 124 ಶಂಕಿತ ಚಿಕೂನ್ ಗುನ್ಯ ರೋಗಿಗಳ ರಕ್ತ ಪರೀಕ್ಷೆ ನಡೆಸಲಾಗಿದೆ. ಆದರೆ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News