ಉದ್ಯಮಿ ವೆಂಕಟೇಶ್ ಪ್ರಭುಗೆ ಗುರು ಸೇವಾ ಧುರೀಣ ಪ್ರಶಸ್ತಿ
ಭಟ್ಕಳ, ಆ.9: ಇತ್ತಿಚೆಗೆ ಮಂತ್ರಾಲಯದಲ್ಲಿ ನಡೆದ ರಾಯರ ಆರಾಧನಾ ಮಹೋತ್ಸವದಲ್ಲಿ ಭಟ್ಕಳ ಮೂಲದ ಉದ್ಯಮಿ ವೆಂಕಟೇಶ ಸುಬ್ರಾಯ ಪ್ರಭು ಇವರಿಗೆ ಮಂತ್ರಾಲಯದ ಶ್ರೀಗಳಾದ ಭುವನೇಂದ್ರತೀರ್ಥ ಶ್ರೀಪಾದರು, ಗುರು ಸೇವಾ ಧುರೀಣ ಪ್ರಶಸ್ತಿ ಪ್ರಧಾನ ಮಾಡಿದರು.
ಮಂತ್ರಾಲಯದಲ್ಲಿ ನಡೆದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಟ್ಕಳ ಮೂಲದ ಉದ್ಯಮಿ ವೆಂಕಟೇಶ ಪ್ರಭು ಇವರನ್ನು ಗುರು ಸೇವಾ ಧುರೀಣ ಪ್ರಶಸ್ತಿ ಪ್ರಧಾನ ಮಾಡಿ ಹರಸಿದರು. ಉದ್ಯಮದಲ್ಲಿ ಅದ್ವೀತಿಯ ಸಾಧನೆ, ಸಾಂಸ್ಕೃತೀಕ ಸಂಘಟನೆಗಳು ಸೇವಾ ಸಂಸ್ಥೆಗಳ ರಚನೆ, ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಸೇವೆ, ಸಾಮಾಜಿಕ, ಸಾಂಸ್ಕೃತೀಕ, ಕ್ರೀಡಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ, ಬಡ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಸೇರಿದಂತೆ ಇತರ ಜನಪರ ಕಾರ್ಯಗಳನ್ನು ಗುರುತಿಸಿ ಶ್ರೀಗಳು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಂದಭದರ್ಲ್ಲಿ ವಿದ್ವಾನ ವೆಂಕಟೇಶ ಬಾಯರಿ, ರಾಜಮಂಡ್ರಿಯ ಗೋಪಾಲ ಶಾಸ್ತ್ರೀ, ಕೋಯಮುತ್ತೂರಿನ ವಿ.ಆರ್. ವಿಠಲ್, ಹಾವೇರಿಯ ಡಾ.ಗುರುರಾಜ ವೈದ್ಯ ಇವರನ್ನು ಶ್ರೀ ಗುರುರಾಘವೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಬದಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ ಸೇರಿದಂತೆ ಇತರ ರಾಜಕೀಯ ಮುಖಂಡರು, ಗಣ್ಯರು ಇದ್ದರು.