×
Ad

ಬಡರೋಗಿಗಳ ಸೇವೆಗೆ ಸಿದ್ಧರಾಗಿ: ವೈದ್ಯರಿಗೆ ಶಾಸಕ ಅಪ್ಪಚ್ಚು ರಂಜನ್ ಕರೆ

Update: 2017-08-09 19:13 IST

ಮಡಿಕೇರಿ, ಆ.9: ನಗರದ ಜಿಲ್ಲಾ ಆಸ್ಪತ್ರೆ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿದ್ದು, ಬಡ ರೋಗಿಗಳಿಗೆತುರ್ತು ಸೇವೆನೀಡಲು ವೈದ್ಯರು ಹಾಗೂ ಸಿಬ್ಬಂದಿಗಳು ಸದಾ ಸಿದ್ಧರಿರಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆಯ ಅಪಘಾತ ಮತ್ತು ತುರ್ತು ವಿಭಾಗದ ಮುಂಭಾಗದಲ್ಲಿ ಹೈಟೆಕ್ ಆಂಬ್ಯುಲೆನ್ಸ್ ಸೇವೆಗೆ ಶಾಸಕರುಚಾಲನೆ ನೀಡಿ ಮಾತನಾಡಿದರು.  

ನಂತರ ಮಾತನಾಡಿದ ಶಾಸಕರು, ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡಿದ್ದು, ತುರ್ತು ಸೇವೆಗಳು ಬಡಜನರಿಗೆ ತಲುಪಿಸುವ ಉದ್ದೇಶದಿಂದ ಶಾಸಕರ ಅನುದಾನದಡಿ ಹೈಟೆಕ್ ಆಂಬ್ಯುಲೆನ್ಸ್ ಒದಗಿಸಲಾಗಿದೆ. ಇದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಒಳಗೊಂಡಿದ್ದು, ವಿಶೇಷ ಸ್ಪೈನ್ ಬೋರ್ಡ್, ಸ್ಕೂಪ್ ಸ್ಟ್ರೆಚರ್, ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳೊಂದಿಗೆ 4 ರಿಂದ 5 ಗಂಟೆಗಳ ತನಕ ರೋಗಿಗೆ ಆಮ್ಲಜನಕ ಒದಗಿಸುವ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.  ಶಾಸಕರ ಅನುದಾನದಡಿ 29 ಲಕ್ಷ ರೂ. ವೆಚ್ಚದಡಿ ಒದಗಿಸಲಾಗಿದ್ದು, ಜಿಲ್ಲೆಯ ಬಡ ರೋಗಿಗಳಿಗೆ ಎಲ್ಲಾ ರೀತಿಯ ಪ್ರಯೋಜನವಾಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಮಹೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಬ್ದುಲ್ ಅಜೀಜ್, ವೈದ್ಯಕೀಯ ಸಿಬ್ಬಂದಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News