×
Ad

ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿನೆ

Update: 2017-08-10 18:12 IST

ಬಾಗೇಪಲ್ಲಿ, ಆ.10: ದಲಿತ ಚಳುವಳಿಯನ್ನು ಧಮನಗೊಳಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಧೋರಣೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅನಿದಿಷ್ಟ ಧರಣಿ ನಡೆಸಿದರು.

ಡಾ.ಎಚ್.ಎನ್.ವೃತ್ತದಿಂದ ಬಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
   

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಬಿ.ಕೃಷ್ಣಪ್ಪ ಬಣ) ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಕೂಲಿ ಕಾರ್ಮಿಕರಿರುವ ಈ ಭಾಗದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯು ಉದ್ದೇಶ ಪೂರಕವಾಗಿ ರೌಡಿ ಪಟ್ಟಿ ತಯಾರಿಸಿ ಪ್ರಕರಣ ದಾಖಲು ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ, ನೂರಾರು ವರ್ಷಗಳ ಇತಿಹಾಸವಿರುವ ಈ ಸಂಘಟನೆಯು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಕಳೆದು 40 ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ದಲಿತ ನಾಯಕರ ವಿರುದ್ದ ರೌಡಿ ಶೀಟರ್ ಪ್ರಕರಣ ದಾಖಲಾಗಿಲ್ಲ. ಆದರೆ ಎಸ್.ಎನ್.ಸುಬ್ಬಾರೆಡ್ಡಿರವರು ಶಾಸಕರಾದ ನಂತರ ತಮ್ಮ ಹಿತಾಸಕ್ತಿಗೋಸ್ಕರ ತಮ್ಮ ವಿರುದ್ದ ಮಾತನಾಡುವ ದಲಿತ ನಾಯಕರ ಮೇಲೆ ಪೊಲೀಸರನ್ನು ಬಳಸಿಕೊಂಡು ರೌಡಿ ಶೀಟರ್ ಪ್ರಕರಣ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ಕಳೆದ 4 ವರ್ಷಗಳ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕೆ ಇಳಿದಾಗ ನಿರೀಕ್ಷಿತ ಮಟ್ಟದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ್ದು, ದಲಿತ ನಾಯಕರೇ ಎಂಬುದು ಅವರು ಮರೆತಿದ್ದಾರೆ. ಅವರದೆ ಪಕ್ಷದಲ್ಲಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಬೂರಗಮಡಗು ಲಕ್ಷ್ಮಿನರಸಿಂಹಪ್ಪ ರವರನ್ನು ನಿಮಗೆ ಜಿ.ಪಂ ಸ್ಥಾನ ಬೇಕಾ ಅಥವಾ ದಲಿತ ಸಂಘಟನೆ ಬೇಕಾ ಎಂದು ನಾವು ಕೇಳಿದಾಗ ಉತ್ತರಿಸಿದ ಅವರು ನನಗೆ ಜಿ.ಪಂ ಸ್ಥಾನಕ್ಕಿಂತ ದಲಿತ ಸಂಘಟನೆಯೇ ಮುಖ್ಯ ಎಂದು ಅವರು ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ದಲಿತರ ಮತ ಬ್ಯಾಂಕ್ ಅತ್ಯಂತ ಪ್ರಮುಖವಾಗಿದ್ದು, ಮುಂದಿನ ಚುನಾವಣೆಯಲ್ಲಿ ನಮ್ಮ ದಲಿತರ ತಾಕತ್ತು ಏನು ಎಂದು ತೋರಿಸುವುದಾಗಿ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣ, ತಾಲ್ಲೂಕು ಸಂಘಟನಾ ಸಂಚಾಲಕರಾದ ವಿ.ಶ್ರೀನಿವಾಸ್, ಆರ್.ಇ.ಶ್ರೀನಿವಾಸ್, ನಾಗರಾಜ್, ಪೈಪಾಳ್ಯ ವೆಂಕಟರಮಣ, ಜಿ.ಎಸ್.ನರಸಿಂಹಪ್ಪ, ಜಿ.ಗಂಗಾಧರ್, ಎಸ್.ವೆಂಕಟರವಣ, ವೆಂಕಟರವಣ, ದೇವಕುಂಟೆ ಆನಂದ್, ಶಿವಪ್ಪ, ಮತ್ತಿರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News