ಉಪ ರಾಷ್ಟ್ರಪತಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟ ಮಹಾನ್ ವ್ಯಕ್ತಿ ಬಿ.ರಾಚಯ್ಯ: ಸಿದ್ದರಾಮಯ್ಯ

Update: 2017-08-10 13:49 GMT

ಚಾಮರಾಜನಗರ.ಆ.10: ದೇಶದ ಉಪ ರಾಷ್ಟ್ರಪತಿಯಾಗುವ ಅವಕಾಶ ಬಂದಾಗಲೂ ಅಧಿಕಾರಕ್ಕೆ ಮಾರು ಹೋಗದ ಬಿ.ರಾಚಯ್ಯರವರ ರಾಜಕೀಯ ಜೀವನ ಎಲ್ಲರಿಗೂ ಮಾರ್ಗದರ್ಶನವಾದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತನಗೆ ರಾಜಕೀಯವಾಗಿ ಮಾರ್ಗ ತೋರಿದ ಮಹಾನ್ ವ್ಯಕ್ತಿ ಬಿ.ರಾಚಯ್ಯರವರು ಅವರ ಆದರ್ಶವನ್ನು ಮುಂದಿಟ್ಟುಕೊಂಡೇ ರಾಜಕಾರಣ ಮಾಡುತ್ತಿದ್ದೇನೆ. ಅದರಿಂದಾಗಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ ಎಂದರು.

1983 ರಲ್ಲಿ ಬಿ.ರಾಚಯ್ಯರವರು ತಮ್ಮನ್ನು ಗುರುತಿಸಿ ಕಾವಲುಪಡೆಗೆ ಅಧ್ಯಕ್ಷನನ್ನಾಗಿ ಮಾಡಿಸಿಲ್ಲ ಅಂದರೆ ಇಂದು ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಬಿ.ರಾಚಯ್ಯರವರು ತಳಹದಿಯಿಂದ ಬಂದವರು, ಬಡವರ ನೋವು ಕಂಡವರು, ಅಧಿಕಾರ ಬಂದಾಗ ಗರ್ವದಿಂದ ಇರದೇ ಸೌಮ್ಯವಾಗಿದ್ದವರು, ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳಿದ್ದವು. ಆದರೆ ಕಾಲ ನಿರ್ಣಯದಂತೆ ಅವರು ಮೂರು ರಾಜ್ಯಗಳ ರಾಜ್ಯಪಾಲರಾದರು ಎಂದು ಹೇಳಿದರು.

ಸಮಾಜ ಒಡೆಯುವ ಕೆಲಸ ಬಿಜೆಪಿಯವರು ಮಾಡ್ತಾ ಇದ್ದಾರೆ ವಿನಃ ರಾಜ್ಯ ಸರ್ಕಾರವಲ್ಲ. ಲಿಂಗಾಯಿತ ಮತ್ತು ವೀರಶೇವ ಪ್ರತ್ಯೇಕ ಧರ್ಮ ರಚನೆ ಮಾಡುವ ಬಗ್ಗೆ ಸರ್ಕಾರ ತನ್ನದೇ ಆದ ನಿಲುವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಾರರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಜನಾದೇಶವಿದೆ ವಿನಃ ಬಿಜೆಪಿಗೆ ಅಲ್ಲ. ಅಧಿಕಾರದ ಆಸೆಯ ಅಮಲಿನಿಂದ ವಿರೋಧ ಪಕ್ಷದವರು ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ. ಇದರಿಂದ ಅವರಿಗೇನು ಲಾಭವಿಲ್ಲ ಎಂದರು.
ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯರವರ ಚಿರಶಾಂತಿ ಧಾಮದಲ್ಲಿ ಅವರ ಸ್ವಾರಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ, ಜಿಲ್ಲಾಕೇಂದ್ರದಲ್ಲಿರುವ ಬಿ.ರಾಚಯ್ಯರವರ ಜೋಡಿರಸ್ತೆಯನ್ನು 100 ಅಡಿ ರಸ್ತೆ ಮೇಲ್ದರ್ಜೆಗೇರಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಧಿತ ಸಮಯಕ್ಕಿಂತ ಒಂದು ಗಂಟೆಯ ತಡವಾಗಿ ಹೆಲಿಕ್ಯಾಪ್ಟರ್ ಆಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಇಲ್ಲಿಗೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳತ್ತಾರೆ ಅನ್ನೋ ಮೂಡನಂಬಿಕೆಗೆ ಬ್ರೇಕ್ ಹಾಕಲಾಗಿದೆ ಎಂದು ಹೇಳಿದರು.

ಬಳಿಕ ನೇರವಾಗಿ ಆಲೂರು ಗ್ರಾಮಕ್ಕೆ ತೆರಳಿ, ಅಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯರವರ ಸಮಾಧಿಗೆ ಪುಷ್ಟಾರ್ಚನೆ ಮಾಡಿದ ಬಳಿಕ ಅಲ್ಲೇ ಇದ್ದ ಕೆಲವು ಅಪರೂಪದ ಛಾಯಾಚಿತ್ರಗಳನ್ನು ನೋಡಿ ಹಳೆಯದನ್ನು ನೆನಪಿಸಿಕೊಂಡು. ಬಿ.ರಾಚಯ್ಯರವರ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಆಲೂರಿನಿಂದ ರಸ್ತೆ ಮಾರ್ಗದಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ, ತಾಲ್ಲೂಕು ಕಛೇರಿ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ಬಿ.ರಾಚಯ್ಯ ಜೋಡಿ ರಸ್ತೆಯನ್ನು 35 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಆಹಾರ ಸಚಿವ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಯು ಟಿ ಖಾದರ್, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಲೋಕಸಭಾ ಸದಸ್ಯ ಆರ್.ದೃವನಾರಾಯಣ್, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಜಯಣ್ಣ, ಮೋಹನಕುಮಾರಿ ,ಕಳಲೆ ಕೇಶವಮೂರ್ತಿ, ಎಂ.ಎಲ್.ಸಿ. ಧರ್ಮಸೇನಾ, ಕನಿಷ್ಟ ವೇತನ ಆಯೋಗದ ಅಧ್ಯಕ್ಷ ಚಿನ್ನಸ್ವಾಮಿ, ಬಿ.ರಾಚಯ್ಯರವರ ಪತ್ನಿ ಗೌರಮ್ಮ, ಪುತ್ರರಾದ ಎ.ಆರ್. ಕೃಷ್ಣಮೂರ್ತಿ, ಎ.ಆರ್. ಬಾಲರಾಜ್, ಅಳಿಯ ಬಿ.ಬಿ ನಿಂಗಯ್ಯ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಮಚಂದ್ರ, ನಗರಸಭಾ ಪ್ರಭಾರ ಅಧ್ಯಕ್ಷ ರಾಜಪ್ಪ, ಸೇರಿದಂತೆ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News