ವಿದ್ಯುತ್ ಸ್ಪರ್ಶ: ರೈಲ್ವೆ ನೌಕರ ಮೃತ್ಯು
Update: 2017-08-10 20:46 IST
ಮದ್ದೂರು, ಆ.10: ಸಮೀಪದ ಶಿವಪುರದ ರೈಲ್ವೆ ನಿಲ್ದಾಣದ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ರೈಲ್ವೆ ನೌಕರ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ಸೆಲ್ವಿಮುರಗೇಶ್ ಅವರ ಪುತ್ರ ಪ್ರಕಾಶ್(32) ಸಾವನ್ನಪ್ಪಿದವ. ಈತ ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮೈಂಟೆನರ್ ಆಗಿ ಕೆಲಸ ಮಾಡುತ್ತಿದ್ದ.
ಎಂದಿನಂತೆ ಹಳಿಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್‌ಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತಿಳಿಸಿದ್ದಾರೆ.