×
Ad

ಝೀಯಾವುಲ್ಲಾ ವರ್ಗಾವಣೆ ಖಂಡಿಸಿ ಪ್ರತಿಭಟನೆ

Update: 2017-08-10 20:48 IST

ಮದ್ದೂರು, ಆ.10: ಜಿಲ್ಲಾಧಿಕಾರಿ ಎಸ್.ಝೀಯಾವುಲ್ಲಾ ಅವರ ವರ್ಗಾವಣೆ ಖಂಡಿಸಿ ತಾಲೂಕಿನ ಬೆಸಗರಹಳ್ಳಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಕೊಪ್ಪ ಹಾಗೂ ಮದ್ದೂರು ರಸ್ತೆ ತಡೆದು ಪ್ರತಿಭಟಿಸಿದ ಅವರು, ಝೀಯಾವುಲ್ಲಾ ಅವರು ಉತ್ತಮ ಅಧಿಕಾರಿಯಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅಂತಹ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದರು.

ಸಂಘ-ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸುತ್ತಿದ್ದುದ್ದಲ್ಲದೆ, ಕೂಲಿಕಾರರು, ಬಡವರು ಮತ್ತು ರೈತಾಪಿ ಜನರ ಬಗ್ಗೆ ಕಾಳಜಿವಹಿಸುತ್ತಿದ್ದರು. ಝೀಯಾವುಲ್ಲಾರಂತಹ ಅಧಿಕಾರಿ ಸೇವೆ ಜಿಲ್ಲೆಗೆ ಅಗತ್ಯವಿರುವುದರಿಂದ ವರ್ಗಾವಣೆ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಮುರಗೇಶ್, ಮಹೇಶ್, ಮೇರಿಯಮ್ಮ, ಎಚ್.ಶ್ವೇತ, ಚಿಕ್ಕತಾಯಮ್ಮ, ಕಮಲಮ್ಮ, ಮಹಾದೇವಪ್ಪ, ನೂರ್‌ಮೇರಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News