ಸಂಘಪರಿವಾರ, ಬಿಜೆಪಿಯನ್ನು ದೇಶದಿಂದ ಹೊರಹಾಕಿ: ಆರ್.ಮೋಹನ್‌ರಾಜ್

Update: 2017-08-10 15:46 GMT

ಮಾಲೂರು, ಆ.10; ಸಂಘಪರಿವಾರ ಹಾಗೂ ಬಿಜೆಪಿಯನ್ನು ದೇಶದಿಂದ ಹೊರಹಾಕಿ ಎಂದು ದಲಿತ ಸ್ವಾಭಿಮಾನ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಮೋಹನ್‌ರಾಜ್ ಅಭಿಪ್ರಾಯಪಟ್ಟರು.

ಅವರು ಗುರುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕ.ದ.ಸಂ.ಸ(ಭೀಮವಾದ) ಆಯೋಜನೆ ಮಾಡಿದ್ದ ಶಾಹು ಮಹರಾಜರ 143ನೇ ಜನ್ಮದಿನಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

3ವರ್ಷದ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಂಘಪರಿವಾರದ ಬಿಜೆಪಿಯ ನಡೆ ಸೂಕ್ಷ್ಮವಾಗಿ ಗಮನಿಸಿ. ಆಸ್ಪಶ್ಯತೆ, ಶೂದ್ರ ಸಮುದಾಯಗಳು ಊರಿನ ಹೊರಗಡೆ ಹೋಗುವ ಸಮಯ ದೂರವಿಲ್ಲ. ರೋಹಿತ್ ವೇಮುಲಾರಂತಹ ಪ್ರತಿಭಾನ್ವಿತ ವಿಧ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯವಸ್ಥೆ ರೂಪಿತವಾಗಿರುವುದು ಖಂಡನೀಯ. ಉತ್ತರ ಪ್ರದೇಶದಲ್ಲಿ ಗೆಲ್ಲಲ್ಲೇಬೇಕು ಎಂದು ಹಠಕ್ಕೆ ಬಿದ್ದು, ಮುಜಫರ್ ನಗರದಲ್ಲಿ ಇವಿಎಂ ಯಂತ್ರಗಳನ್ನು ರಾತ್ರೋರಾತ್ರಿ ಬದಲಾವಣೆ ಮಾಡಿ ಗೆದ್ದರು. ಯೋಗಿ ಆದಿತ್ಯಾನಾಥ ಅಧಿಕಾರಕ್ಕೆ ಬಂದ ಮೇಲೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತೆಗೆದಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದವರು ಭ್ರಷ್ಟಚಾರ ಮುಕ್ತ ಮಾಡುತ್ತೇನೆ ಎಂಬುದು ನಾಚಿಗೇಡಿನ ಸಂಗತಿಯಾಗಿದೆ.

ಹೋಟೇಲ್‌ಗೆ ತೆರಳಿ ಊಟ ಮಾಡಿದರೆ ಶೇ.15ರಷ್ಟು ಜಿಎಸ್‌ಟಿ ಕಟ್ಟುವ ಪರಿಸ್ಥಿತಿ ಉದ್ಬವಾಗಿದೆ. ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿದ್ದರ ಪರಿಣಾಮ ಶ್ರೀಸಾಮಾನ್ಯ ಕ್ಯೂನಲ್ಲಿ ಬ್ಯಾಂಕಿನ ಮುಂಭಾಗದಲ್ಲಿ ನಿಲ್ಲುವಂತಾಯಿತು. ದೇಶ ಸಂಕಷ್ಠದ  ಸಮಯದಲ್ಲಿದೆ. ಗೋವು ಪವಿತ್ರ ಎಂದು ಆಹಾರ ಪದ್ದತಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದರು.

 2018 ಹಾಗೂ 2019ರ ಚುನಾವಣೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಬಹುದೊಡ್ಡ ಸವಾಲಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆಯಿಡೋಣ ಎಂದರು.

ಜಿಲ್ಲಾದ್ಯಕ್ಷ ಕೆ.ಮದಿವಣ್ಣನ್, ಹಿರಿಯ ದಲಿತ ಮುಖಂಡ ಪಾಪಣ್ಣ, ಡಾ.ಜಿ.ಹನುಮಪ್ಪ, ದಲಿತ ನಾಗರೀಕ ಸಮಿತಿಯ ರಾಜ್ಯಾಧ್ಯಕ್ಷ ಕೋಡೂರು ಗೋಪಾಲ್, ಬೆಂಗಳೂರು ವಿಭಾಗೀಯ ಸಂಚಾಲಕ ಪುರಸನಹಳ್ಳಿ ಶ್ರೀನಿವಾಸ್, ರಾಜ್ಯ ಸಂಘಟನಾ ಕಾರ್ಯದರ್ಶಿ ಲೋಕೇಶ್, ಕೋಡೂರು ಪ್ರಭಾಕರ್, ವಕೀಲ ಕೆ.ಮುನಿಕೃಷ್ಣಪ್ಪ, ಪೋಸ್ಟ್ ಕೃಷ್ಣಪ್ಪ, ಬೆಂಗಳೂರು ಮುನಿಯಪ್ಪ, ಪುರಸನಹಳ್ಳಿ ಮುನಿನಾರಾಯಣ್, ಪ್ರೇಂಡ್ಸ್ ಸಂತೋಷ್, ದಿನ್ನೇರಿ ಶಿವಣ್ಣ, ಬಿ.ಎಸ್.ಪಿ ಮುನಿರಾಜು, ಭೀಮವಾದದ ತಾಲೂಕು ಸಂಚಾಲಕ ಉಪವಾಸಪುರ ಆನಂದ್, ಜಿಲ್ಲಾ ಸಂಘಟನಾ ಸಂಚಾಲಕ ಮೈಲಾಂಡಹಳ್ಳಿ ಮುನಿಯಪ್ಪ, ಕಾವೇರಪ್ಪ, ವಡಗನಹಳ್ಳಿ ರಮೇಶ್, ಆಶೋಕ್, ಮಾದನಹಟ್ಟಿ ನಾರಾಯಣಸ್ವಾಮಿ, ರಾಜಪ್ಪ, ರಾಮಪ್ಪ, ಕಲಾಮಂಡಳಿ ರವಿ, ಉದಯ್‌ಕುಮಾರ್, ಮುನೇಗೌಡ, ಜಯರಾಮಯ್ಯ, ನಾರಾಯಣಮೂರ್ತಿ, ಆಟೋ ವೆಂಕಟೇಶ್, ಶಂಕರಪ್ಪ, ನಾಗೇಶ್, ರವಿ, ವರದೇನಹಳ್ಳಿ ರಮೇಶ್, ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News