×
Ad

ಹಕ್ಕುಗಳನ್ನು ಪಡೆಯಲು ಸಣ್ಣ ಜಾತಿಗಳು ಒಂದಾಗಿ ಹೋರಾಟ ನಡೆಸಬೇಕು: ಬಸವರಾಜ್ ಕೌತಳ್

Update: 2017-08-10 21:27 IST

ಸಕಲೇಶಪುರ, ಆ.10: ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಲು ಸಣ್ಣ ಜಾತಿಗಳು ಒಂದಾಗಿ ಹೋರಾಟನ ಡೆಸ ಬೇಕಾದ ಅಗತ್ಯವಿದೆ ಎಂದು ದಲಿತ ವಿಮೋಚನ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ಬಸವರಾಜ್ ಕೌತಳ್ ಹೇಳಿದರು.

ಪಟ್ಟಣದ ಅಂಬೆೀಡ್ಕರ್ ಭವನದಲ್ಲಿ ನಡೆದ ಆದಿವಾಸಿ ಹಲಸರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ದತ್ತ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುವಂತಹ ಪರಿಸ್ಥಿಯನ್ನು ವ್ಯವಸ್ಥೆ ಶಾಶ್ವತವಾಗಿರಿಸಿದೆ ಎಂದರು.

ಪ್ರದಾನಿ ನರೇಂದ್ರ ಮೋದಿ ಹೇಳಿಕೆಗಳಲ್ಲಿ ದೇಶವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರತರಾಗಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವ ಯೋಜನೆಯು ಮಾನವನ ಅಭಿವೃದ್ದಿಗೆ ಪೂರಕವಾಗಿಲ್ಲ. ಅತ್ಯಂತ ಹಿಂದುಳಿದ ಸಮೂಹವನ್ನು ಮುಖ್ಯವಾಹಿನಿಗೆ ತರುವ ಪ್ರಮಾಣಿಕ ಪ್ರಯತ್ನಯಾರು ಮಾಡುತ್ತಿಲ್ಲ ಎಂದರು.

ಆದಿವಾಸಿ ದಲಿತ ಭೂಹಕ್ಕುಗಳ ರಾಜ್ಯ ನಾಯಕಿ ಜೋತಿ ವಿಠಲ್ ಮಾತನಾಡಿ, ಯಾವುದೇ ಹಕ್ಕು ಸುಲಭವಾಗಿ ದಕ್ಕುವುದಿಲ್ಲ ಎನ್ನುತ್ತ, ಕಟ್ಟಕಡೆಯ ಬಸ್ಸಿನ ಹಾಗೆ ಚಳವಳಿ ಬಡವರ ಕಡೆಯ ಆಯುಧವಾಗಿದೆ. ಹೋರಾಟಗಳು ನ್ಯಾಯವನ್ನು ದೋರಕಿಸಿ ಕೊಟ್ಟಿವೆ. ಮುಂದೆಯು ಇದೆ ನಮ್ಮ ಆಸ್ತ್ರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂದು ದಲಿತ ವಿಮೋಚನ ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷ ಮರಿಜೋಸಫ್, ಮೈಸೂರು ವಿಭಾಗದ ಅಧ್ಯಕ್ಷ ಸೋಮಶೇಕರ್, ಹಕ್ಕಿ ಪಿಕ್ಕಿ ಜನಾಂಗ ಹೋರಾಟ ಸಮಿತಿಯ ಮುಖಂಡ ಹೂರಾಜ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಮೆಹಬೂಬ್, ಬಿಎಸ್ಪಿ ಮುಖಂಡ ಲಕ್ಷ್ಮಣ್ ಕೀರ್ತಿ, ವೇಣು ಪ್ರಿಯ, ಆದಿವಾಸಿ ಸಂಗದ ಜಿಲ್ಲಾಧ್ಯಕ್ಷ ನವೇನ್ ಸದಾ, ಕಾರ್ಯದರ್ಶಿ ಪೊನ್ನಪ್ಪ, ರಮೇಶ್, ಮಂಜುನಾಥ್, ದಲಿತ ಮುಕಂಡ ಬಸವರಾಜ್ ಬೆಳಗೋಡು ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News