ವಿದ್ಯೆ ಜೊತೆಗೆ ನೆಲೆ ಗುರುತಿಸಿಕೊಳ್ಳಿ: ಡಾ.ಬಿ.ಜಯಶ್ರೀ

Update: 2017-08-11 12:54 GMT

ತುಮಕೂರು, ಆ.11: ಶಿಕ್ಷಣದ ಜೊತೆಗೆ ನಿಮ್ಮ ನೆಲೆಗಳನ್ನು ಗುರುತಿಸಿಕೊಂಡು ಮುಂದೆ ಬನ್ನಿ ಎಂದು ಕಲಾವಿದೆ ಡಾ.ಬಿ.ಜಯಶ್ರೀ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ನಗರದ ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯೊಂದಿಗೆ ಮನಸ್ಸಿಗೆ ತೃಪ್ತಿಕೊಡುವಂತಹ ಕಲೆಯನ್ನು ಬೆಳಸಿಕೊಂಡಾಗ ಶಾಂತಿಸಿಗುತ್ತದೆ. ಇದರಿಂದ ಕಲೆ ಮತ್ತು ಸಂಸ್ಕೃತಿಯನ್ನು ಕಲಿಯಿರಿ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಎಸ್.ಮಲ್ಲೇಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಒಳ್ಳೆಯ ವ್ಯಕ್ತಿತ್ವ ಮತ್ತು ನೈಪುಣ್ಯತೆಯನ್ನು ಬೆಳಸಿಕೊಳ್ಳಬೇಕು. ವಿದ್ಯಾಭ್ಯಾಸದಿಂದ ಕೆಲುವು ವೇಳೆ ಮನಸ್ಸು ಚಂಚಲವಾಗುತ್ತದೆ. ಸಂಸ್ಕೃತಿ, ಕ್ರೀಡೆ, ಕಲೆಗಳಿಂದ ಮನಸ್ಸಿಗೆ ನೆಮ್ಮದಿಸಿಗುತ್ತದೆ. ಇದರಿಂದ ಮನಸ್ಸು ಶಾಂತಿ ಮತ್ತು ಪ್ರಬುದ್ಧವಾಗುತ್ತದೆ ಎಂದರು.

ಪ್ರಾಧ್ಯಾಪಕರಾದ ಡಾ.ಬಿ.ಎಸ್.ಮಂಜುಳ,ಡಾ.ಎಚ್.ಪಿ.ವೀರಭದ್ರಸ್ವಾಮಿ,ಸಿ.ಎಸ್.ಸೋಮಶೇಖರಯ್ಯ,ಮಧು ಎಸ್.ಕುಮಾರ್, ಪ್ರೊ.ಪದ್ಮಜಾ ವೈ.ಎಂ. ಮತ್ತಿತರರು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News