ಟಾಟಾ ಏಸ್ ಪಲ್ಟಿ: ಮಹಿಳೆ ಸಾವು, ಐವರಿಗೆ ಗಾಯ
Update: 2017-08-11 20:47 IST
ಮಂಡ್ಯ, ಆ.11: ಕೆ.ಆರ್.ಪೇಟೆ ತಾಲೂಕಿನ ಮೈಸೂರು ಮುಖ್ಯ ರಸ್ತೆಯ ಹೆಮ್ಮನಹಳ್ಳಿ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿ, ಐದು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಅರೆಬೂವನಹಳ್ಳಿ ಗ್ರಾಮದ ಸಣ್ಣತಾಯಮ್ಮ(60) ಅಪಘಾತದಲ್ಲಿ ಸಾವನ್ನಪ್ಪಿದ್ದು, ಗೀವ್ರವಾಗಿ ಗಾಯಗೊಂಡಿರುವ ಬೊಮ್ಮೇಗೌಡನಕೊಪ್ಪಲಿನ ವಸಂತ, ಸಣ್ಣ ಪಾಪಣ್ಣ, ರಮ್ಯ, ಸೌಮ್ಯ, ರಾಮೇಗೌಡ, ಬೋರೇಗೌಡ ಅವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಬೊಮ್ಮೇಗೌಡನಕೊಪ್ಪಲು ಗ್ರಾಮದಿಂದ ಹೇಮಗಿರಿ ಬಳಿ ಇರುವ ಚಂದುಗೊನಳಮ್ಮ ದೇವಸ್ಥಾನಕ್ಕೆ ಹರಕೆ ತೀರಿಸಲು ತೆರಳುತ್ತಿದ್ದಾಗೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.