ಮದ್ದೂರಿನಲ್ಲಿ ಬೃಹತ್ ಉದ್ಯೋಗ ಮೇಳ

Update: 2017-08-11 15:24 GMT

ಮದ್ದೂರು, ಆ.11: ಯುವಜನರು ಕೌಶಲ್ಯ ತರಬೇತಿ ಪಡೆದುಕೊಂಡು ಸ್ವಉದ್ಯೋಗದಿಂದ ಅರ್ಥಿಕವಾಗಿ ಸ್ವಾವಲಾಂಬಿಗಳಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಸಲಹೆ ಮಾಡಿದ್ದಾರೆ.

ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಮತ್ತು ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಭ್ಯಾಸ ಮುಗಿಸಿ ಕೆಲಸ ಸಿಗಲಿಲ್ಲ ಎಂದು ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಬದಲು ಕೌಶಲ್ಯ ತರಬೇತಿಗಳನ್ನು ಪಡೆದು ಸ್ವಉದ್ಯೋಗ ಕೈಗೊಂಡರೆ ಇತರರಿಗೂ ಉದ್ಯೋಗ ಕೊಡಬಹುದು ಎಂದು ಅವರು ಹೇಳಿದರು. ನಿರುದ್ಯೋಗಿ ಯುವಜನರಿಗೆ ಸರಕಾರದ ವಿವಿಧ ಯೋಜನೆಗಳಡಿ ಅನೇಕ ಸವಲತ್ತು ದೊರೆಯಲಿದ್ದು, ಅವುಗಳ ಸದುಪಯೋಗಪಡೆದುಕೊಂಡು ಜೀವನ ರೂಪಿಸಿಕೊಳ್ಳುವಂತೆಯೂ ಅವರು ಕಿವಿಮಾತು ಹೇಳಿದರು.
ಉದ್ಯೋಗಮೇಳದಲ್ಲಿ ಸುಮಾರು 500 ವಿದ್ಯಾರ್ಥಿಗಳು ಹಾಗು ನಿರುದ್ಯೋಗಿಗಳು ಪಾಲ್ಗೊಂಡಿದ್ದು, ವಿವಿಧ ಕಂಪನಿಗಳಲ್ಲಿ ಕೆಲಸಕ್ಕಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಂಡರು.

ಜಿಪಂ ಸದಸ್ಯರಾದ ಮರಿಹೆಗ್ಗಡೆ, ರೇಣುಕಾ ರಾಮಕೃಷ್ಣ, ತಾಪಂ ಅಧ್ಯಕ್ಷೆ ಜಯಲಕ್ಷಮ್ಮ, ಸದಸ್ಯರಾದ ಮಂಜುಳ, ಚಿಕ್ಕಮರಿಯಪ್ಪ, ಸತೀಶ್, ಇಓ ಡಾ.ಕೃಷ್ಣಮೂರ್ತಿ, ಇತರ ಗಣ್ಯರು ಉಪಸ್ಥಿತರಿದ್ದರು.
ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಪಂ ಹಾಗು ತಾಪಂ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News